September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಲಯ ಮಟ್ಟದ ಕ್ರೀಡಾಕೂಟ: ಎಲ್.ಸಿ.ಆರ್ ವಿದ್ಯಾ ಸಂಸ್ಥೆಗೆ ಪ್ರಶಸ್ತಿ

ಕಕ್ಯಪದವು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಮತ್ತು ಮಧ್ವ ಕ್ಲಸ್ಟರ್ ಇವರ ಸಹಯೋಗದೊಂದಿಗೆ 14 ಮತ್ತು 17ರ ವಯೋಮಾನದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ವಾಮದಪದವು ವಲಯಮಟ್ಟದ ಕ್ರೀಡಾಕೂಟವು ಅಕ್ಟೋಬರ್ 29 ಮತ್ತು 30 2025 ರಂದು ಎಸ್.ವಿ.ಎಸ್ ದೇವಳ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಈ ಕ್ರೀಡಾಕೂಟದಲ್ಲಿ ಎಲ್ . ಸಿ.ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಒಟ್ಟು 22 ವಿದ್ಯಾರ್ಥಿಗಳು ಭಾಗವಹಿಸಿದರು.
ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿ ಯಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು,
ಬಾಲಕಿಯರ 14ರ ವಯೋಮಾನದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅಪರ್ಣ ಎ ಶೆಟ್ಟಿ ದ್ವಿತೀಯ ಸ್ಥಾನ,

ಗುಂಡು ಎಸೆತ ಹಾಗೂ ಡಿಸ್ಕ್ ಎಸೆತದಲ್ಲಿ ಹನ್ಸುಜ ತೃತೀಯ ಸ್ಥಾನ,

ಹಾಗೂ 14ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಅಬ್ದುಲ್ ರೆಹಮಾನ್ ರಾಹಿದ್ ದ್ವಿತೀಯ ಸ್ಥಾನ,

17ರ ವಯೋಮಾನದ ಬಾಲಕಿಯರ ಜಾವಲಿನ್ ಎಸೆತದಲ್ಲಿ ಧನ್ವಿತಾ ಪ್ರಥಮ ಸ್ಥಾನ ಹಾಗೂ ಮನಸ್ವಿನಿ.ಕೆ ತೃತೀಯ ಸ್ಥಾನ,

17ರ ವಯೋಮಾನದ ಬಾಲಕರ ಹರ್ಡಲ್ಸ್ ಓಟದಲ್ಲಿ ಪ್ರೀತಮ್ ಡಿ . ಕೆ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಪ್ರಶಸ್ತಿ ವಿಜೇತ ಎಲ್ಲಾ ಕ್ರೀಡಾಪಟುಗಳು ಮುಂದೆ ನಡೆಯುವ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾಗೂ ಪ್ರಶಸ್ತಿಗೆ ಭಾಜನರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ,ಪ್ರಾಂಶುಪಾಲರು, ಸಂಯೋಜಕರು ,ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿಯವರಾದ ಹರಿಣಾಕ್ಷಿ ಜಿ.ಕೆ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ.

Related posts

ಅನುಗ್ರಹ ಟ್ರೈನಿಂಗ್ ಕಾಲೇಜು ಫೈರ್ ಅಂಡ್ ಸೇಫ್ಟಿ ವಿಭಾಗದ ವಿದ್ಯಾರ್ಥಿಗಳಿಂದ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ

Suddi Udaya

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಒಕ್ಕೂಟದ ಸಭೆ

Suddi Udaya

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಸಮಾರೋಪ

Suddi Udaya

ಪುಂಜಾಲಕಟ್ಟೆ ಕೆಪಿಎಸ್ ವಿದ್ಯಾರ್ಥಿಗಳಿಗೆ ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ನವೀನತೆ ಮತ್ತು ತಾಂತ್ರಿಕ ಕೌಶಲ್ಯ ತರಬೇತಿ

Suddi Udaya

ಎಸ್.ಐ.ಟಿ ಕಚೇರಿಗೆ ಸುಜಾತ ಭಟ್ ವಿಚಾರಣೆಗೆ ಹಾಜರು

Suddi Udaya

ವೇಣೂರು ಯಕ್ಷಗಾನ ಸಂಘದಿಂದ ತಾಳಮದ್ದಳೆ ಸೇವೆ

Suddi Udaya
error: Content is protected !!