27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅನುಗ್ರಹ  ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 1 ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ ಫಾ! ಅಬೆಲ್ ಲೋಬೊ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ವಂ! ಫಾ ವಿಜಯ್ ಲೋಬೊ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಸಂಚಾಲಕರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜವನ್ನು ಆರೋಹಿಸಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡುವುದರ ಮೂಲಕ ಗೌರವವನ್ನು  ಅರ್ಪಿಸಿದರು.

10ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಚಾಲಕರು ಕನ್ನಡ ಭಾಷೆ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡದ ಸ್ಥಾನಮಾನ ಮತ್ತು ಭಾಷೆಯ ಉಳಿವಿಗಾಗಿ ಕನ್ನಡಿಗರು ಮಾಡಬೇಕಾದ ಕಾರ್ಯಗಳನ್ನು ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಕುರಿತ ಹಾಡು ನೃತ್ಯಗಳ ಮೂಲಕ ರಂಜಿಸಿದರು. ವಿದ್ಯಾರ್ಥಿಗಳಾದ  ಪ್ರತೀಕ್ಷ ಶೆಟ್ಟಿ ಸ್ವಾಗತಿಸಿ ಸಿಂಚನ ವಂದಿಸಿ ಅಂಶಿಕ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ರಾಡಿ : ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ನಿಧನ

Suddi Udaya

ಎ.6 : ಇಳಂತಿಲ ವಾಣಿಶ್ರೀ ಗೆಳೆಯರ ಸಂಘದ 30ನೇ ವರ್ಷದ ವಾರ್ಷಿಕೋತ್ಸವ “ಇಳೋತ್ಸವ 2024” : ಪೂರ್ವಭಾವಿ ಸಭೆ, ಹಾಗೂ ನೂತನ ಸಮಿತಿ ರಚನೆ

Suddi Udaya

ಅಂಡಿಂಜೆ : ಮಕ್ಕಿಲ ನಿವಾಸಿ ಶ್ರೀಮತಿ ಚೆಲುವಮ್ಮ ಪೂಜಾರ್‍ತಿ ನಿಧನ

Suddi Udaya

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯದಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಪ್ರಯುಕ್ತ ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಗೆ ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ಕೊಡುಗೆ

Suddi Udaya

ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya
error: Content is protected !!