27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯು ನ.1ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಜರುಗಿತು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣವನ್ನು ನೆರವೇರಿಸಿದರು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜು ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಮಹಾಬಲ ಗೌಡ ಪ್ರಧಾನ ಭಾಷಣಕಾರರಾಗಿ ಆಗಮಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಾಜ್ಯದ ಪ್ರಗತಿಗೋಸ್ಕರ ನನ್ನ ಜೀವನದಲ್ಲಿ ಒಂದಷ್ಟು ಕೊಡುಗೆಗಳನ್ನು ಕೊಡುತ್ತೇನೆ ಎಂಬ ಸಂಕಲ್ಪವನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಮಾಡಿದರೆ, ಅದುವೇ ಕನ್ನಡಕ್ಕೆ ಮತ್ತು ರಾಜ್ಯಕ್ಕೆ ನಾವು ಕೊಡುವಂತಹ ಸಾಧನೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗರು ಸಾಧನೆಯನ್ನು ಮಾಡುವುದರ ಜೊತೆ ಜೊತೆಗೆ, ಜಗತ್ತಿನ ಎಲ್ಲ ಭಾಗಗಳನ್ನು ನಾವು ಅವಲೋಕನ ಮಾಡಿಕೊಂಡರೆ, ಕನ್ನಡಿಗರು ಉದ್ಯಮ ಕ್ಷೇತ್ರದಲ್ಲೂ ದೇಶಕ್ಕೆ ಮತ್ತು ಜಗತ್ತಿಗೆ ತನ್ನದೇಯಾದ ಕೊಡುಗೆಗಳನ್ನು ನೀಡಿದ್ದಾರೆ. ಮುಂಬೈ, ದೆಹಲಿ ಅಥವಾ ದೇಶದ ಯಾವುದೇ ಭಾಗಕ್ಕೆ ಹೋದರು ನಮಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಒಬ್ಬ ಕನ್ನಡಿಗ ಕಾಣುವುದಕ್ಕೆ ಸಿಕ್ಕೇ ಸಿಗುತ್ತಾನೆ ಎಂದು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಸಮಾಜ ಕಲ್ಯಾಣ ಇಲಾಖೆಯ ಧನಂಜಯ್, ಪಿಡಬ್ಲ್ಯೂಡಿ ಯ ಬಕಪ್ಪ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ., ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿವಿ ಪ್ರತಿಮಾ, ADLR ಲೀಲಾವತಿ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಪರೀಕ್ಷೆ 2024ನೇ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿದ ಮಹಮ್ಮದ್ ಅಜೀಂ, ನಿಶ್ಮಿತಾ, ಮೋಕ್ಷಿತ್, ಪೂಜಾ, ಸಿಂಚನ, ಸನ್ನಿಧಿ ಎಸ್ ಹೆಗಡೆ, ಗ್ರೀಷ್ಮ, ಅಮೃತ ಕೆ, ಅಂಕಿತ, ಐಶ್ವರ್ಯ ಡಿ ಗೌಡ, ವರ್ಷ, ಸುಜನ್ ಸಿ ಭಂಡಾರಿ, ನಿಶ್ಚಿತ್, ಸನ್ವಿತ, ಪ್ರಿಯಾಂಕ, ಪಾತಿಮಾ ಶಮ್ಮಾ, ನಿತ್ಯಶ್ರೀ, ಚೈತನ್ಯ ಯಜೇಶ್ ರೈ, ಪ್ರಾಪ್ತಿ.ಎಂ ರಾವ್, ತನ್ವಿ ಭಟ್, ಭಾಗಲಕ್ಷ್ಮೀ, ಎಸ್ ಕೀರ್ತೀಕ ಅವರನ್ನು ಸನ್ಮಾನಿಸಲಾಯಿತು. 2024-25 ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ, ಗೃಹ ರಕ್ಷಕದಳ ಘಟಕಾಧಿಕಾರಿ ಜಯಾನಂದ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತು ಉಪಾಧ್ಯಕ್ಷರು, ಸದಸ್ಯರು ಹಾಗೂ ಎಲ್ಲಾ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಮತ್ತು ವಿವಿಧ ಸಂಘಟನೆಯವರು, ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ವಾಣಿ ಕಾಲೇಜು ಉಪನ್ಯಾಸಕರಾದ ಬೆಳಿಯಪ್ಪ ಗೌಡ ಮತ್ತು ಅನುರಾಧ ಕೆ ರಾವ್ ನಿರೂಪಿಸಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ವಂದಿಸಿದರು.

Related posts

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದಿಂದ ಸಾವಿರಾರು ಜನರ ಸಮ್ಮುಖದಲ್ಲಿ, ವಿಜೃಂಭಣೆಯ “ಗುರು ವಂದನೆ” ಕಾರ್ಯಕ್ರಮ

Suddi Udaya

ಸೆ.5: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ನವೋದಯ ಶಾಲಾ ಬಳಿ ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಅಪಘಾತ: ಇಬ್ಬರಿಗೆ ಗಾಯ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ರಾಜ್ಯಸಭಾ ಸದಸ್ಯ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ

Suddi Udaya

ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಬಹುಮಾನ ವಿತರಣಾ ದಿನ”

Suddi Udaya
error: Content is protected !!