September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ 13ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ

ಉಜಿರೆ: ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆಯ ಪೂರ್ವಭಾವಿ ಸಭೆಯು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನ. 4ರಂದು ನಡೆಯಿತು‌.

ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶೀಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರವರು ಮಾತನಾಡಿ ಸುಮಾರು12 ವರ್ಷಗಳ ಹಿಂದೆ ಪ್ರಾರಂಭವಾದ ಪಾದಯಾತ್ರೆಯು ಇಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಾತ್ವಿಕ ಶಕ್ತಿ ಮತ್ತು ಭಕ್ತಿಯನ್ನು ತೋರಿಸುತ್ತದೆ. ದೇವರ ದಯೆ ಮತ್ತು ಹಿರಿಯರ ಅನುಗ್ರಹವಿದ್ದರೆ ಪರಂಪರೆ ಸೃಷ್ಟಿಯಾಗುತ್ತದೆ ಎಂದರು.

ವಿಧಾನ ಪರಿಷತ್ ಮಾಜಿ ಶಾಸಕ, ಮೆಸ್ಕಾಂ ಅಧ್ಯಕ್ಷ ಕೆ‌.ಹರೀಶ್ ಕುಮಾರ್ ಮಾತನಾಡಿ ಪ್ರತಿವರ್ಷ ಪಾದಯಾತ್ರೆಯಲ್ಲಿ ನಾಡಿನ ಸಮಸ್ತ ಭಕ್ತರು ಅತ್ಯಂತ ಶ್ರದ್ದಾ ಭಕ್ತಿಯಿಂದ ಸೇರುತ್ತಾರೆ. ನಾವೆಲ್ಲರೂ ಭಕ್ತಿಯಿಂದ ಪಾಲ್ಗೊಂಡು ಪುನೀತರಾಗೋಣ.ಕ್ಷೇತ್ರದ ಪಾವಿತ್ರತೆಯನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಆಗುವುದು ಇಲ್ಲ ಎಂದರು.

ಎಸ್.ಡಿ.ಎಂ ಪೂರಣ್ ವರ್ಮ ಮಾತನಾಡಿ ಉಜಿರೆಯಿಂದ ಶ್ರೀ ಕ್ಷೇತ್ರಕ್ಕೆ ನಡೆಯುವ ಪಾದಯಾತ್ರೆಯ ಯಶಸ್ವಿಗೆ ಶ್ರೀ ಕ್ಷೇತ್ರದ ಭಕ್ತರು, ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತೆರಳಿ ಪೂಜ್ಯ ಖಾವಂದರ ಮಾತು ಕೇಳಿದಾಗ ನಮ್ಮಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ವಂದ್ರ ಎಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಪೈ, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ,ಉಜಿರೆ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆಯ ಕರಪತ್ರ ಬಿಡುಗಡೆಗೊಳಿಸಲಾಯಿತು. ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್, ಸತ್ಯದರ್ಶನ ಕಾರ್ಯಕ್ರಮ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಆಗರ್ತ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಯಶೋಧರ್ ಸ್ವಾಗತಿಸಿದರು. ಯೋಜನಾಧಿಕಾರಿ ರಾಮ್ ಕುಮಾರ್ ನಿರೂಪಿಸಿದರು. ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿಎಸ್ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜನಜಾಗೃತಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ವಿವಿಧ ಅಭಿಪ್ರಾಯಗಳನ್ನು ತಿಳಿಸಿದರು.

Related posts

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ: ಏಕಾಹ ಭಜನಾ ಕಾರ್ಯಕ್ರಮ ಮತ್ತು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ, ಸಾಧಕರಿಗೆ ಸನ್ಮಾನ

Suddi Udaya

ಇಂದಬೆಟ್ಟು: ಭಾರಿ ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿತ, ಪ್ರಾಣಾಪಾಯದಿಂದ ಪಾರು

Suddi Udaya

ಕೊಕ್ರಾಡಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ

Suddi Udaya

ಉಜಿರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಗಳು ಶುಭಾರಂಭ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

Suddi Udaya
error: Content is protected !!