ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸಲು ಸರಕಾರದ ಗಮನ ಸೆಳೆಯುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗೆ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರ ಹಿತ ರಕ್ಷಣಾ ವೇದಿಕೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಇವರನ್ನು ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವಂತೆ ಸರಕಾರದ ಗಮನ ಸೆಳೆಯಲು ಕೋರಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ತನ್ನದೇ ಪಾಲು ಹೊಂದಿರುವ ರಬ್ಬರು ಹಿಂದೆ ಸರಕಾರ ಹೆಚ್ಚಿನ ಮಹತ್ವ ನೀಡಿ ಸಹಾಯಧನ, ಸಾಲ ಹಾಗೂ ಇತರ ಪ್ರೋತ್ಸಾಹ ನೀಡಿದ್ದ ರಬ್ಬರು ಬೆಳೆಯ ವಿಸ್ತೀರ್ಣ ಕಡಿಮೆಯಾಗುತ್ತಿರುವುದು, ಅವಲಂಬಿತ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಇದೀಗ ರಬ್ಬರು ಕೃಷಿಯನ್ನು ಹೊಸದಾಗಿ ಪ್ರಾರಂಭಿಸಲು ಆಸಕ್ತಿ ತೋರಿಸದೇ ಇರಲು ಕಾರಣಗಳ ಬಗ್ಗೆ ವಿವರಿಸಲಾಗಿದೆ. ಅಂತೆಯೇ ಕೇರಳ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಪ್ರೋತ್ಸಾಹಧನ ಯೋಜನೆಯನ್ನು ನಮ್ಮ ರಾಜ್ಯದಲ್ಲಿಯೂ ಜಾರಿಗೊಳಿಸಿ ಬೆಳೆಗಾರರನ್ನು ರಕ್ಷಿಸುವಂತೆ ವಿನಂತಿಸಲಾಯಿತು. ಎಂದು ವೇದಿಕೆಯ ಅಧ್ಯಕ್ಷ ಶ್ರೀಧರ ಜಿ ಭಿಡೆ ತಿಳಿಸಿದರು.

ಈ ಸಂದರ್ಭದಲ್ಲಿ ಸಲಹೆಗಾರರಾದ ಹಿರಿಯ ಅರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ, ರಬ್ಬರು ಮಂಡಳಿ ಸದಸ್ಯರಾದ ಮುಳಿಯ ಕೇಶವ ಭಟ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಗೋಪಾಲಕೃಷ್ಣ ಭಟ್, ಕೃಪಾ, ಸಂಯೋಜಕ ಅನಂತ ಭಟ್ ಎಂ, ಕಾರ್ಯದರ್ಶಿಗಳಾದ ರಾಜು ಶೆಟ್ಟಿ ಉಜಿರೆ, ವಿಜಯ ಕೃಷ್ಣ ಪೆರಾಜೆ ಮತ್ತು ಬೆಳ್ತಂಗಡಿ ರಬ್ಬರ್ ಸೊಸೈಟಿ ನಿರ್ದೇಶಕ ಶಾಜಿ ಪಿ ಎ ಶಿಬಾಜೆ ಉಪಸ್ಥಿತರಿದ್ದರು.

Related posts

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

Suddi Udaya

ಜನರ ನೆಮ್ಮದಿ ಕೆಡಿಸಿದೆ ನೆಮ್ಮದಿ ಕೇಂದ್ರ: ಶೀಘ್ರವೇ ಬಾಜರು – ಜೋಡುಕಟ್ಟೆ ರಸ್ತೆ ದುರಸ್ತಿ – ಶಾಸಕ ಹರೀಶ್ ಪೂಂಜ

Suddi Udaya

ಬಳಂಜ :ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ರೂ.1.25 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Suddi Udaya

ಮೂಡುಕೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya
error: Content is protected !!