32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ :ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ- ನಾಲ್ಕೂರು- ತೆಂಕಕಾರಂದೂರು ಇದರ ವತಿಯಿಂದ ನಡೆಯುವ 39ನೇ ವರ್ಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆ 17ರಂದು ನಡೆಯಿತು.

ಬೆಂಗಳೂರು ಉದ್ಯಮಿ ಅನಂತರಾಮ ಹೊಳ್ಳ ಮಜ್ಜೇನಿಬೈಲು ನಾಲ್ಕೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಶ್ರದ್ದಾ ಭಕ್ತಿಯಿಂದ ನಡೆಯುವ ಗಣೇಶೋತ್ಸವಕ್ಕೆ ನಾವೆಲ್ಲರೂ ಸಹಕಾರ ನೀಡುವ ಮೂಲಕ ಊರಿನ ವೈಭವವನ್ನು ಹೆಚ್ಚಿಸೋಣ ಎಂದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್‌ಎಸ್ ಎಲ್ಲರನ್ನು ಸ್ವಾಗತಿಸಿ ಬಳಂಜ ಶ್ರೀ ಗಣೇಶೋತ್ಸವ ಎಲ್ಲರ ಕೂಡುವಿಕೆ ಮತ್ತು ಸಹಕಾರದಿಂದ ನಡೆಯಲಿದೆ.ಕಾರ್ಯಕ್ರಮದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಮುಖ್ಯ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್, ಗಣೇಶೋತ್ಸವ ಸಮಿತಿ ಪ್ರ ಕಾರ್ಯದರ್ಶಿ ಗಣೇಶ್ ದೇವಾಡಿಗ ಸಂಭ್ರಮ, ಮಾಜಿ ಅಧ್ಯಕ್ಷರಾದ ವಿಜಯ್ ಹೆಗ್ಡೆ, ಸಂತೋಷ್ ಪಿ ಕೋಟ್ಯಾನ್, ರಾಕೇಶ್ ಹೆಗ್ಡೆ ಬಳಂಜ,ಗುರುಪ್ರಸಾದ್ ಹೆಗ್ಡೆ,ಪ್ರಗತಿಪರ ಕೃಷಿಕರಾದ ಸತೀಶ್ ರೈ ಬಾರ್ದಡ್ಕ, ತಿಮ್ಮಪ್ಪ ಪೂಜಾರಿ,ದೇಜಪ್ಪ ಪೂಜಾರಿ,ಸತೀಶ್ ಶೆಟ್ಟಿ ಕುರೆಲ್ಯ,ಜಗದೀಶ್ ರೈ ಹಾನಿಂಜ,ಪ್ರಮುಖರಾದ ಸಂತೋಷ್ ಕುಮಾರ್ ಹಿಮರಡ್ಡ, ರಂಜಿತ್ ಮಜಲಡ್ಡ,ರಾಘವೇಂದ್ರ ಭಟ್,ಜಗದೀಶ್ ಬಳ್ಳಿದಡ್ಡ,ಪ್ರವೀಣ್ ಪೂಜಾರಿ ಲಾಂತ್ಯಾರು,ರಕ್ಷಿತ್ ಬಗ್ಯೋಟ್ಟು,ಜಗದೀಶ್ ಪೆರಾಜೆ,ಅಣ್ಣಿ ದೇವಾಡಿಗ,ಅನಿಲ್ ಬೊಂಟ್ರೋಟ್ಟು,ನಿವೃತ್ತ ಸೈನಿಕ ಮೋಹನ್ ಕುಲಾಲ್, ಅಶೋಕ್ ಶೆಟ್ಟಿ ಪೊಸಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಂದಿಸಿದರು.ಸಮಿತಿ ಪದಾಧಿಕಾರಿಗಳು ಸಹಕರಿಸಿದರು.

Related posts

ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ: ಬಿಜೆಪಿ ಮುಖಂಡ ರಾಜೇಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

Suddi Udaya

ಕನ್ಯಾಡಿ 2 ಸ.ಉ. ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಉಚಿತ ದಂತ ತಪಾಸಣೆ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

Suddi Udaya
error: Content is protected !!