July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೀಲ್‌ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗೆ ಆಸರೆಯಾದ ಧರ್ಮಸ್ಥಳ ಸಿ.ಎ ಬ್ಯಾಂಕ್

ಧರ್ಮಸ್ಥಳ ಗ್ರಾಮದ ನೀರಚಿಲುಮೆ ಎಂಬಲ್ಲಿ ವೀಲ್ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ಜಗದೀಶ್ ನಾಯ್ಕ ಎಂಬವರಿಗೆ ಧರ್ಮಸ್ಥಳದ ಸಿ.ಎ ಬ್ಯಾಂಕ್ ಆಡಳಿತ ಮಂಡಳಿ ನೆರವಾಗಿದೆ.

ಆಕಸ್ಮಿಕ ಅವಘಡವೊಂದರಲ್ಲಿ ತನ್ನ ಸೊಂಟದ ಕೆಳಗಿನ ಶಕ್ತಿಯನ್ನೇ ಕಳೆದುಕೊಂಡರೂ ಕೂಡಾ ಛಲ ಬಿಡದ ತ್ರಿವಿಕ್ರಮನಂತೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸಣ್ಣ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ಜೀವ ಅದು. ಇವರ ವಿಷಯಗಳ ಬಗ್ಗೆ ಶ್ಯಾಮ್ ಪ್ರಸಾದ್ ಮತ್ತು ಶೈನಿ ಕಾಮತ್ ದಂಪತಿಯ ‘ರೈಡಿಂಗ್ ಜೋಡಿಗಳು’ ಎಂಬ ಯೂಟ್ಯೂಬ್ ನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಪ್ರಸಾರ ಮಾಡಿದ್ದರು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಜಗದೀಶ್ ಅವರ ವ್ಯಾಪಾರಕ್ಕೆ ಮಳೆಗಾಳಿಗಳಿಂದ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಿಎ ಬ್ಯಾಂಕ್‌ ಅಧ್ಯಕ್ಷ ಪ್ರೀತಮ್ ಅವರನ್ನು ಸಂಪರ್ಕಿಸಿ ಏನಾದರೂ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು.

ಸದಾ ವಿಭಿನ್ನ ಹಾಗೂ ವಿಶಿಷ್ಟ ಯೋಜನೆಗಳ ಮೂಲಕ ಮಾದರಿ ಕಾರ್ಯಕ್ರಮಗಳ ಮೂಲಕ ಜನಾನುರಾಗಿ ಆಗಿರುವ ಪ್ರೀತಮ್ ಅವರು ತಮ್ಮ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ಜೊತೆಗೆ ಚರ್ಚಿಸಿ ಜಗದೀಶ್ ಅವರಿಗೆ ವ್ಯಾಪಾರಕ್ಕೆ ಸುರಕ್ಷಿತವಾದ ವ್ಯವಸ್ಥೆ ಮಾಡಿರುತ್ತಾರೆ. ಬೆಳ್ತಂಗಡಿ ಶಾಸಕರ ಮೂಲಕ ಉದ್ಘಾಟನೆಗೊಂಡಿದ್ದು ಜಗದೀಶ್ ಅವರ ಮುಖದಲ್ಲಿನ ಮುಗುಲ್ನಗು ಎಲ್ಲವನ್ನೂ ಹೇಳುತಿತ್ತು.

ಸಮಾಜಮುಖಿ ಚಿಂತನೆಗಳಿಂದ ಸಹಕಾರಿ ಸಂಘವೊಂದು ಹೇಗೆ ಜನಮನ್ನಣೆ ಗಳಿಸಬಹುದು ಎಂಬುದಕ್ಕೆ ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಂಘ ಮಾದರಿ ನಿದರ್ಶನವಾಗಿದೆ.

Related posts

ಬೆಳ್ತಂಗಡಿ: ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ

Suddi Udaya

ಆಟೋ ರಿಕ್ಷಾ ಮಗುಚಿಬಿದ್ದು ಮೃತಪಟ್ಟ ಬಾಲಕನ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಭೇಟಿ

Suddi Udaya

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya

ಬೋಳಿಯಾರ್ ಸಮೀಪ ಕಾರಿಗೆ ಅಡ್ಡ ಬಂದ ಒಂಟಿ ಸಲಗ

Suddi Udaya
error: Content is protected !!