24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ಪಟ್ಟಾಭಿಷೇಕ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು ಇಂದು ಪಟ್ಟಾಭಿಶಕ್ತರಾಗಿದ್ದಾರೆ.

ಬೆಳ್ತಂಗಡಿ ಧಮ೯ಪ್ರಾಂತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೀರೋ ಮಲಬಾರ್ ಕಥೋಲಿಕ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷರಾದ ಅತೀ ವಂದನೀಯ ರಾಫೇಲ್ ತಟ್ಟಿಲ್ ರವರು ಮುಖ್ಯ ಅರ್ಚಕರಾಗಿ, ಆರ್ಚ್ ಬಿಷಪ್ ಅತೀ ವಂದನೀಯ ಜೋಸೆಫ್ ಪಾಮ್ಪ್ಲಾನಿ ತಲಶೇರಿ ಮೆಟ್ರೋ ಪೊಲಿಟನ್ ಧರ್ಮಪ್ರಾಂತ್ಯ ರವರ ಹಾಗೂ ಭಾರತದ ವಿವಿಧ ಕಡೆಗಳಿಂದ ಆಗಮಿಸಿದ ನಲವತ್ತನಾಲ್ಕು ಧರ್ಮಾಧ್ಯಕ್ಷರ ಪುಣ್ಯಸಾನಿಧ್ಯದಲ್ಲಿ ಪಟ್ಟಾಭಿಷೇಕವು ನೆರವೇರಿತು. ಭಾರತದ ವಿವಿಧ ಕಡೆಗಳಿಂದ ನಾಲ್ನೂರಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ನಾಲ್ಕು ಸಾವಿರಕ್ಕೂ ಮೀರಿದ ಕ್ರೈಸ್ತಬಾಂಧವರು ಪಾಲ್ಗೊಂಡರು.

ಪಟ್ಟಾಭಿಷೇಕದ ನಂತರದ ಸಾರ್ವಜನಿಕ ಸಮ್ಮೇಳನದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನೆಗಳು ಹಾಗೂ ನಿವೃತ್ತರಾಗುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮ್ಮೇಳನದಲ್ಲಿ ಮಾತನಾಡಿದ ಭಾರತ ಕಥೋಲಿಕ್ ಧರ್ಮಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷ ಅತೀ ವಂದನೀಯ ಆಂಡ್ರೂಸ್ ಥಾಯತ್,” ಅತೀ ವಂದನೀಯ ಜೇಮ್ಸ್ ರವರು ಜನಹಿತ ಕೆಲಸಗಳನ್ನು ಮಂಚೂಣಿಯಲ್ಲಿ ಇರುವವರು, ಇದರಿಂದ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಈ ನಾಡಿಗೆ ಒಳಿತಾಗುವುದು ಖಚಿತ” ಎಂದರು. “ಕಳೆದ 26 ವರ್ಷಗಳಲ್ಲಿ ಮಾಡಿದ ಅತ್ಯಂತ ಕಠಿಣ ಸಮಯದಲ್ಲಿ ತ್ಯಾಗ ಪ್ರೀತಿ ನಿಷ್ಠೆಯಿಂದ ಮಾಡಿದ ಸೇವೆ ಬಣ್ಣಿಸಲು ಅಸಾಧ್ಯ” ಎಂದು ಆಂಡ್ರಿಯಾ ಫ್ರಾನ್ಸಿಯಾ ಹೇಳಿದರು.

Related posts

ಉಜಿರೆ ಶ್ರೀ ಧ.ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ

Suddi Udaya

ಓಡಿಲ್ನಾಳ : ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಹಣ ತೆಗೆಯಲು ಅಪರಿಚಿತನಿಗೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿದ ಅಪರಿಚಿತ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ. ತೆಗೆದು ವಂಚನೆ

Suddi Udaya

ತಾ| ಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾದರಿಸಿದ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ನೂತನ ಅಧ್ಯಕ್ಷರಾಗಿ ಪ್ರಫುಲ್ಲಚಂದ್ರ ಆಯ್ಕೆ

Suddi Udaya
error: Content is protected !!