September 6, 2026
ರಾಜ್ಯ ಸುದ್ದಿಸಂಘ-ಸಂಸ್ಥೆಗಳು

ನ.9: ಎಸ್.ಕೆ. ಗೋಲ್ಡ್‌ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ

ಮಂಗಳೂರು: ಎಸ್.ಕೆ. ಗೋಲ್ಡ್‌ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭವು ನ.11ರಂದು ಕೊಟ್ಟಾರಚೌಕಿ ಆಡಳಿತ ಕಚೇರಿ ಬಳಿ ನಡೆಯಲಿದೆ.

ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹಾಗೂ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳವರುದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿರುವರು. ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷರು, ಎಸ್‌.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇವರು ವಹಿಸಲಿರುವರು.

ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್, ಅಧ್ಯಕ್ಷರು, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿ, ಮಂಗಳೂರು ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಇವರು ನವೀಕೃತ ವಿಶ್ವಸೌಧ ಕಟ್ಟಡದ ಉದ್ಘಾಟನೆ, ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ. ಖಾದರ್ ಲಿಫ್ಟ್ ಉದ್ಘಾಟನೆ, ದಿನೇಶ್ ಗುಂಡೂರಾವ್ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವರಿ ಸಚಿವರು ನವೀಕೃತ ಆಡಳಿತ ಕಛೇರಿ ಉದ್ಘಾಟನೆ, ಸಂಸದ ಕ್ಯಾ. ಬ್ರಿಜೇಶ್ ಚೌಟ ನವೀಕೃತ ಕೊಟ್ಟಾರಚೌಕಿ ಶಾಖೆಯ ಉದ್ಘಾಟನೆ, ಧನಂಜಯ ಪಾಲ್ಕೆ ಕೆನರಾ ಜ್ಯುವೆಲ್ಲರ್ಸ್, ಮಂಗಳೂರು ಇವರು ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆ ಉದ್ಘಾಟನೆ, ಶಿಲ್ಪಿ ಡಾ. ಅರುಣ್ ಯೋಗಿರಾಜ್ ಇವರು ಪಾಲ್ಕೆ ಬಾಬುರಾಯ ಆಚಾರ್ಯ ‘ಪುತ್ಥಳಿ ಅನಾವರಣಗೊಳಿಸಲಿರುವರು.

ಮುಖ್ಯ ಅತಿಥಿಗಳಾಗಿ ಡಾ| ವೈ. ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ, ಡಿ. ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ, ಕೆ. ಉಮೇಶ್ ಆಚಾರ್ಯ ಆಡಳಿತಾಧಿಕಾರಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು, ರಮೇಶ್ ಎಚ್. ಎನ್. ಸಹಕಾರ ಸಂಘಗಳ ಉಪನಿಬಂಧಕರು, ದ.ಕ. ಜಿಲ್ಲೆ, ಶಶಿಕುಮಾ‌ರ್ ರೈ, ಅಧ್ಯಕ್ಷರು, ದ.ಕ. ಸಹಕಾರ ಯೂನಿಯನ್, ಮಂಗಳೂರು, ಜಯಕರ ಶೆಟ್ಟಿ ಇಂದ್ರಾಳಿಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಶ್ರೀಮತಿ ತ್ರಿವೇಣಿ ರಾವ್ ಕೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ತಾಲೂಕು ಭಾಗವಹಿಸಲಿರುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಪೂರ್ವಾಹ್ನ 9.00ರಿಂದ 10.30ರ ವರೆಗೆ’ಗೋಲ್ಡನ್ ಬುಕ್ ಆಫ್ ರೆಕಾರ್ಡ್’ ನೂತನ ವಿಶ್ವದಾಖಲೆ ಖ್ಯಾತಿಯವಿದ್ವಾನ್ ಯಶವಂತ ಎಂ. ಜಿ. ಮತ್ತು ಬಳಗದವರಿಂದ ಭಾವ-ಭಕ್ತಿ ಗಾನಸುಧಾ.ಅಪರಾಹ್ನ 2.00ರಿಂದ 2.45ರ ವರೆಗೆ ವಿಚಾರಗೋಷ್ಠಿ, ವಿಷಯ : ‘ದೇವಮಾನವ’ ಪಾಲ್ಕೆ ಬಾಬುರಾಯ ಆಚಾರ್ಯರ ಜೀವನ ಮೌಲ್ಯಗಳು. ಸಂಪನ್ಮೂಲ ವ್ಯಕ್ತಿಗಳು :ಬಿ.ಎ. ಆಚಾರ್ಯ ಮಣಿಪಾಲ, ಅಧ್ಯಕ್ಷರು, ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ (ರಿ.), ಉಡುಪಿ ಡಾ। ಎಸ್. ಪಿ. ಗುರುದಾಸ್, ಅಧ್ಯಕ್ಷರು, ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು. ಸಮನ್ವಯಕಾರರು : ಪಿ. ಉಪೇಂದ್ರ ಆಚಾರ್ಯ, ‘ವಿಶ್ವಕರ್ಮಶ್ರೀ’ ಪ್ರಶಸ್ತಿ ಪುರಸ್ಕೃತರು ಅಧ್ಯಕ್ಷರು, ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು. ಅಪರಾಹ್ನ 3.00ರಿಂದ ಸಾಯಂಕಾಲ 6.00ರ ವರೆಗೆ ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು ಇವರ ಸಂಯೋಜನೆಯಲ್ಲಿ, ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ, ಯಕ್ಷಗಾನ ನಾಟ್ಯವೈಭವ , ಸಾಯಂಕಾಲ 6.00ರಿಂದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

Related posts

ಗುರಿಪಳ್ಳದಲ್ಲಿ ಬ್ರಹ್ಮಶ್ರೀ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ

Suddi Udaya

ಉದ್ಯಮಿ ಸುರೇಶ್ ದೇವಾಡಿಗರವರು ತೋಟತ್ತಾಡಿ ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಭಜನಾ ತಂಡದವರಿಗೆ ನೀಡಿದ ಸಮವಸ್ತ್ರದ ಬಿಡುಗಡೆ

Suddi Udaya

ಭಾರೀ ಮಳೆ: ನಾಳೆ(ಜು.2) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

Suddi Udaya

ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ರಂಜಿತ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಮತ್ತು ಸ್ಚಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ

Suddi Udaya
error: Content is protected !!