September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವಂತೆ ಶಾಸಕ ಹರೀಶ್ ಪೂಂಜ ಇವರಿಗೆ ಮನವಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ ಇವರನ್ನು ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವಂತೆ ಸರಕಾರದ ಗಮನ ಸೆಳೆಯಲು ಕೋರಿ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಹಿಂದೆ ಸರಕಾರ ರಬ್ಬರು ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಸಹಾಯಧನ, ಸಾಲ ಹಾಗೂ ಇತರ ಪ್ರೋತ್ಸಾಹ ನೀಡಿದ್ದ ರಬ್ಬರು ಬೆಳೆಗೆ ಉತ್ತೇಜನ ನೀಡಿ ಹೆಚ್ಚಿನ ಕೃಷಿಕರು ತೊಡಗಿಕೊಳ್ಳುವಂತೆ ಮಾಡಿದ್ದು, ಇದೀಗ ಅವಲಂಬಿತ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಇದೀಗ ರಬ್ಬರು ಕೃಷಿಯನ್ನು ಹೊಸದಾಗಿ ಪ್ರಾರಂಭಿಸಲು ಆಸಕ್ತಿ ತೋರಿಸದೇ ಇರಲು ಕಾರಣಗಳ ಬಗ್ಗೆ ವಿವರಿಸಲಾಯಿತು. ಅಂತೆಯೇ ಕೇರಳ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಪ್ರೋತ್ಸಾಹಧನ ಯೋಜನೆಯನ್ನು ನಮ್ಮ ರಾಜ್ಯದಲ್ಲಿಯೂ ಜಾರಿಗೊಳಿಸಿ ಬೆಳೆಗಾರರನ್ನು ರಕ್ಷಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಶ್ರೀಧರ ಜಿ ಭಿಡೆ ಸಂಯೋಜಕ ಅನಂತ ಭಟ್ ಎಂ, ಕಾರ್ಯದರ್ಶಿ ರಾಜು ಶೆಟ್ಟಿ, ಬೆಳ್ತಂಗಡಿ ರಬ್ಬರ್ ಸೊಸೈಟಿ ಉಪಸ್ಥಿತರಿದ್ದರು.

Related posts

“ಲೋಕಾಯುಕ್ತ ಜನ ಸಂಪರ್ಕ ಸಭೆ: ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರದ ಕುರಿತು ಜಾಗೃತಿ-ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ

Suddi Udaya

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ನಿರೀಕ್ಷಣಾ ಜಾಮೀನು ಆದೇಶ ಮುಂದೂಡಿಕೆ

Suddi Udaya

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಚೆಂಡೆ ತರಬೇತಿ ಉದ್ಘಾಟನೆ

Suddi Udaya

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ದ್ವಿತೀಯ ಸೋಪಾನ, ಗರಿ, ಚರಣ ಪರೀಕ್ಷೆ

Suddi Udaya

ಧರ್ಮಸ್ಥಳ: ನಾರ್ಯ ನಿವಾಸಿ ಪ್ರಶಾಂತ್ ಗೌಡ ಅಸೌಖ್ಯದಿಂದ ನಿಧನ

Suddi Udaya
error: Content is protected !!