September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ಮಿನಿ ಕ್ರೀಡಾಕೂಟ ಅಥ್ಲೆಟಿಕ್ಸ್ ಸ್ಪರ್ಧೆ : 100 ಮೀ. ಓಟದಲ್ಲಿ ಚಿನ್ನ ಗೆದ್ದ ಅದ್ವಿಕಾ ಕೆಪಿ

ಬೆಳ್ತಂಗಡಿ: ಕಂಠೀರವ ಕ್ರೀಡಾಂಗಣದಲ್ಲಿ ನ.4 ರಂದು ನಡೆದ ಕೂಟದಲ್ಲಿ ದಕ್ಷಿಣ ಕನ್ನಡದ ಅದ್ವಿಕಾ ಕೆ.ಪಿ. ನಾಲ್ಕನೇ ಆವೃತ್ತಿಯ 14 ವಯೋಮಿತಿ ಕರ್ನಾಟಕ ಮಿನಿ ಕ್ರೀಡಾಕೂಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಬಾಲಕಿಯರ 100ಮೀ. ಓಟದ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಈ ಮೂಲಕ ಕ್ರೀಡಾಕೂಟದ ಅತಿವೇಗದ ಓಟಗಾರ್ತಿ ಎನಿಸಿದರು.

ಇವರು ಮಂಗಳ ಕ್ರೀಡಾಂಗಣದ ಮಂಗಳ ಅಥ್ಲೆಟಿಕ್ ಕ್ಲಬ್ ನಲ್ಲಿ ಅಂತರರಾಷ್ಟ್ರೀಯ ಕೋಚ್ ದಿನೇಶ್ ಕುಂದರ್ ರವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದವರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಡಾ. ಅರುಣ್ ಕೆಪಿ ಮತ್ತು ಗೀತಾ ದಂಪತಿಯ ಸುಪುತ್ರಿಯಾಗಿದ್ದು, ಸೈಂಟ್ ಆಗ್ನೆಸ್ ಸಿಬಿಎಸ್ಸಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Related posts

ಉತ್ತರಖಂಡ ಹರಿದ್ವಾರ ಸಾಧನಾ ಕುಠಿರದ 8 ನೇ ವಾರ್ಷಿಕೋತ್ಸವ: ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಗಂಗಾ ಆರತಿ

Suddi Udaya

ಲಾಯಿಲ: ಆದರ್ಶ ನಗರದ ನಿವಾಸಿ ಶ್ರೀಮತಿ ಜಯಂತಿ ಹೆಗ್ಡೆ ನಿಧನ

Suddi Udaya

ಆರಂಬೋಡಿ 137ನೇ ಬೂತ್ ನಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಉಜಿರೆ: ರುಡ್ ಸೆಟ್‌ನಲ್ಲಿ ವಿದ್ಯುತ್ ಉಪಕರಣ ಹಾಗೂ ದ್ವಿಚಕ್ರ ವಾಹನ ರಿಪೇರಿ ತರಬೇತಿ ಸಮಾರೋಪ

Suddi Udaya

2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

Suddi Udaya

ನಾಳೆ(ಎ.27): ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

Suddi Udaya
error: Content is protected !!