September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಕ್ರಮ ಗೋಹತ್ಯೆ ಪ್ರಕರಣದಲ್ಲಿ ತಕ್ಷಿರು ನಡೆಸಲು ಉದ್ದೇಶಿಸಿದ್ದ ಸ್ಥಳಗಳ ಜಪ್ತಿ

ಧರ್ಮಸ್ಥಳ: ಅಕ್ರಮವಾಗಿ ಕಾರಿನಲ್ಲಿ ಗೋಮಾಂಸ ಮಾಡಲು ಮೂರು ದನಗಳನ್ನು ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಎರಡನೇ ಆರೋಪಿ ಮಹಮ್ಮದ್ ಸಿನಾನ್ ರವರ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಳು ಹಾಕಿ ಜಪ್ತಿ ಮಾಡಿದ್ದಾರೆ.

ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಜ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್@ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಜೋಹಾರ ಸೇರಿ ಮೂವರ ವಿರುದ್ಧ ಕಲ5,12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11,(1)(D) ಪ್ರಾಣಿ ಹಿಂಸೆ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಇಬ್ರಾಹಿಂ ಖಲೀಲ @ತೌಸಿಫ್ ಎಂಬಾತನು ಅಕ್ರಮವಾಗಿ ಜಾನುವಾರುಗಳನ್ನು ಮಾಂಸ ಮಾಡಲು ಉದ್ದೇಶಿಸಿದ ಸಜೀಪನಡು ಗ್ರಾಮದ ತಂಚಿಬೆಟ್ಟು ಎಂಬಲ್ಲಿನ ಮನೆಯನ್ನು ಹಾಗೂ ಪ್ರಕರಣದ ಇನ್ನೊಬ್ಬ ಆರೋಪಿ ಮಹಮ್ಮದ್ ಸಿನಾನ್ ಎಂಬಾತನು ಸಜಿಪಪಡು ಗ್ರಾಮದ ಕೋಟೆಕಣಿ ಎಂಬಲ್ಲಿ ಮಾಂಸ ಇಡಲು ಉದ್ದೇಶಿಸಿದ ಕೋಣೆ ಜಪ್ತಿ ಮಾಡಲಾಗಿರುತ್ತದೆ.

Related posts

ನ.1:ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ‘ಜೈ ಭಜರಂಗ ಬಲಿ’ ನಾಟಕ ಮತ್ತೊಮ್ಮೆ ಪ್ರದರ್ಶನ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮಸಭೆ

Suddi Udaya

ಕಣಿಯೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾಂಗ್ರೇಸ್ ಸೇರ್ಪಡೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಭ್ರಮದ ಜಾತ್ರೋತ್ಸವ

Suddi Udaya

ಗುರುವಾಯನಕೆರೆ: ಅನುಮಾನಸ್ಪದ ರೀತಿಯಲ್ಲಿ ಯುವಕನೋರ್ವ ಮೃತದೇಹ ಪತ್ತೆ

Suddi Udaya

ಮಚ್ಚಿನ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!