ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಲಯನ್ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ನೀಡಿದ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ ಸಭೆ ಬೆಳ್ತಂಗಡಿಯಲ್ಲಿ ನಡೆಯಿತು.

ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ವಸಂತ ಕುಮಾರ್ ಶೆಟ್ಟಿಯವರು ಎಂ. ಜಿ. ಶೆಟ್ಟಿಯವರ ಕಾರ್ಯವೈಖರಿ, ದಿಟ್ಟತನ, ನಾಯಕತ್ವ ಗುಣ, ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ನೀಡಿದ ಬಗ್ಗೆ ನುಡಿ ನಮನದಲ್ಲಿ ವಿವರಿಸಿದರು. ಬೆಳ್ತಂಗಡಿ ಲಯನ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ. ಕೆ., ನಿಕಟಪೂರ್ವ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಸುಭಾಷಿಣಿ, ಲಿಯೋ ಅಧ್ಯಕ್ಷೆ ಡಾ. ಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಪ್ರಾಂತೀಯ ಅಧ್ಯಕ್ಷರುಗಳಾದ ವೆಂಕಟೇಶ್ ಹೆಬ್ಬಾರ್, ರಾಜು ಶೆಟ್ಟಿ, ನಿತ್ಯಾನಂದ ನಾವರ, ಪ್ರಕಾಶ್ ಶೆಟ್ಟಿ ನೊಚ್ಚ, ಧರಣೇಂದ್ರ.ಕೆ. ಜೈನ್, ಸ್ಥಾಪಕ ಸದಸ್ಯ ವಿಶ್ವನಾಥ್ ಆರ್. ನಾಯಕ್, ಮಾಜಿ ಅಧ್ಯಕ್ಷರುಗಳಾದ ರಾಮಕೃಷ್ಣ ಗೌಡ, ಉಮೇಶ್ ಶೆಟ್ಟಿ ಮುಂತಾದವರು ನುಡಿ ನಮನ ಸಲ್ಲಿಸಿದರು. ಮಾಜಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ದಾ ನುಡಿನಮನ ಸಭೆಯನ್ನು ನಿರ್ವಹಿಸಿದರು. ಎಂ. ಜಿ. ಶೆಟ್ಟಿಯವರ ಕುಟುಂಬ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ಮಾಜಿ ಅಧ್ಯಕ್ಷರುಗಳಾದ ಸುಶೀಲ ಹೆಗ್ಡೆ, ಜಯಂತ್ ಶೆಟ್ಟಿ ಕುಂಟಿನಿ, ರವೀಂದ್ರ ಶೆಟ್ಟಿ ಬಳಂಜ ಲಯನ್ಸ್ ಸದಸ್ಯರುಗಳಾದ ಪ್ರತಿಭಾ ಹೆಬ್ಬಾರ್, ಎ. ಕೆ. ಶಿವನ್, ಪದ್ಮನಾಭ ಟಿ, ಕೃಷ್ಣ ಕೆ. ಆಚಾರ್, ಸುರೇಶ ಶೆಟ್ಟಿ ಲಾಯಿಲ, ವಿನ್ಸಿ ಟಿ. ಡಿಸೋಜ, ಮಂಜುನಾಥ್ ಜಿ., ತಂಗಚ್ಚನ್, ಸುಂದರಿ, ಗೋಪಾಲಕೃಷ್ಣ ಕಾಂಚೋಡು, ರಮೇಶ್, ತುಕಾರಾಮ್ ಬಿ., ರೀನಾ ಕೆ. ಜೆ., ಚಂದ್ರಶೇಖರ್ ಶೆಟ್ಟಿ ಕಿರಣ್ ಕುಮಾರ್ ಅನಂತ ಕೃಷ್ಣ ದತ್ತಾತ್ರೇಯ ಗೊಲ್ಲ ಸಭೆಯಲ್ಲಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

Suddi Udaya

ಎಸ್.ಡಿ.ಎಂ ಕಾಲೇಜು : ವಿದ್ಯಾರ್ಥಿ ತಯಾರಿಕೆಯ 30ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

Suddi Udaya

ಉರುವಾಲುಪದವು ಶಿವಾಜಿನಗರ ಶ್ರೀ ಮಹಮ್ಮಾಯಿ ಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ: ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ, ನವಕ ಕಲಶಾಭಿಷೇಕ

Suddi Udaya

ನಾವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ

Suddi Udaya

ರೆಖ್ಯ ,ಕಳೆಂಜ, ಕೊಕ್ಕಡ, ಶಿಶಿಲ ರಸ್ತೆಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ವೇಗ ನಿಯಂತ್ರಕ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ

Suddi Udaya

ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Suddi Udaya
error: Content is protected !!