ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ 2025-26 ನೇ ಸಾಲಿನ ಪ್ರಥಮ ಹಂತದ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.

ಎಸ್ ಡಿ ಎಂ ಸಿ ಉಪಾಧ್ಯಕ್ಷ ಉಮೇಶ್ ಪ್ರಭು ಹಡೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ,ಪಂಚಾಯತ್ ಸದಸ್ಯರಾದ ಗಣೇಶ್ ಗೌಡ ಹಾಗೂ ಶ್ರೀಮತಿ ವೇದಾವತಿ, ಮುಖ್ಯಶಿಕ್ಷಕ ರಾಜೇಂದ್ರ ಭಟ್, ಪೋಷಕ ಪ್ರತಿನಿಧಿ ಕೃಷ್ಣಪ್ಪ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪ ಉಪಸ್ಥಿತರಿದ್ದರು.
ಶ್ರೀಮತಿ ನಿಖಿಲಾ ಸ್ವಾಗತಿಸಿದರು.ಮುಖ್ಯ ಶಿಕ್ಷಕರಾದ ರಾಜೇಂದ್ರ ಭಟ್ ಪ್ರಸ್ತಾವಿಕ ನುಡಿಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಉದ್ದೇಶ ಮತ್ತು ಮಕ್ಕಳ ಪ್ರಗತಿ, ಶಾಲೆಯ ಅಗತ್ಯ ಬೇಡಿಕೆ ಗಳ ಬಗ್ಗೆ ತಿಳಿಸಿದರು. ಬಳಿಕ 2024 -2025 ನೆಯ ಸಾಲಿನಲ್ಲಿ ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಅಭಿನಂದಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀಮತಿ ಭವ್ಯ ರವರು ನಿರ್ವಹಣೆ ಮಾಡಿದರು. ಬಳಿಕ ವಲಯಮಟ್ಟದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀಮತಿ ಜಯಶ್ರೀ ನಿರ್ವಹಣೆ ಮಾಡಿದರು. ನಂತರ ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಗ್ರಾಮಪಂಚಾಯತ್ ವತಿಯಿಂದ ನಡೆಸಲಾದ ಚಿತ್ರಕಲೆ, ರಂಗೋಲಿ, ಪ್ರಬಂಧ ರಚನೆ,ಘೋಷವಾಕ್ಯ ರಚನೆ ಈ ಸ್ಪರ್ಧೆಗಳ ವಿಜೇತರನ್ನು ಗ್ರಾಮಪಂಚಾಯತ್ ವತಿಯಿಂದ ಗೌರವಿಸಲಾಯಿತು.
ಶಿಕ್ಷಕಿ ಶ್ರೀಮತಿ ವಿನೋದ ಮಕ್ಕಳ ಕಲಿಕೆಯ ಮೇಲೆ ಆರೋಗ್ಯ ಆಹಾರಕ್ರಮ, ಸಂಸ್ಕಾರ ಬೆಳೆಸುವಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯ ಎಂಬ ಬಗ್ಗೆ ಅರಿವು ಮೂಡಿಸಿದರು. ಮುಖ್ಯ ಅತಿಥಿ ಶ್ರೀಮತಿ ಸುನಂದಾ ಎಸ್ ಎಸ್ ಎಲ್ ಸಿ ಯಲ್ಲಿ 4ನೆಯ ಭಾರಿಯು 100% ಫಲಿತಾಂಶ ಸಾಧಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಪಂಚಾಯತ್ ಸದಸ್ಯರಾದ ಗಣೇಶ್ ಗೌಡ ಇವರು ಹೆಚ್ಚುತ್ತಿರುವ ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ ಹಾಗೂ ಜವಾಬ್ದಾರಿ ಎಷ್ಟು ಮುಖ್ಯ ಎಂಬುದಾಗಿ ಮನವರಿಕೆ ಮಾಡಿದರು. ಅಲ್ಲದೆ ಶೇ.100 ಫಲಿತಾಂಶ ಸಾಧನೆಯಾದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಪ್ರೋತ್ಸಾಹ ನೀಡುವುದಾಗಿ ಹೇಳುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು. ಬಳಿಕ ಪೋಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಉಮೇಶ್ ಪ್ರಭು ಹಡೀಲ್ ರವರು ವಿಶೇಷವಾಗಿ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳ ಪೋಷಕರಿಗೆ ಮಕ್ಕಳ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಿದರು. ನಂತರ ಪೋಷಕರು ತಮ್ಮ ಮಕ್ಕಳ ಉತ್ತರ ಪತ್ರಿಕೆಗಳನ್ನ ನೋಡಿ ತರಗತಿ ಶಿಕ್ಷಕರ ಜೊತೆ ಚರ್ಚಿಸಿದರು. ಶ್ರೀಮತಿ ಮೀನ ಕಾರ್ಯಕ್ರಮ ನಿರೂಪಿಸಿ. ಶ್ರೀಮತಿ ಪುಷ್ಪ ಧನ್ಯವಾದವಿತ್ತರು.











