27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

ಹೊಸಪಟ್ಣ; ಸಾಮಾಜಿಕ ಸೇವೆಯಲ್ಲಿ ಮುಂಚೂಣಿ ಯಲ್ಲಿರುವ ಬಂಟ್ವಾಳ ತಾಲೂಕು ಪಿಲಾತ್ತಬೆಟ್ಟು ಗ್ರಾಮಾದ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ.) ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ನೂರಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿರುವುದು ಜಿಲ್ಲಾ ಪ್ರಶಸ್ತಿ ಬರಲು ಕಾರಣವಾಗಿದೆ. ಇದನ್ನು ಮನಗಂಡು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಹೊಸಪಟ್ಣ ಹಾಗೂ ಜಂಟಿ ಸಂಸ್ಥೆಗಳಾದ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಹೊಸಪಟ್ಣ ಇದರ ಸರ್ವ ಸದಸ್ಯರು ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ಸಾಧನೆಯನ್ನು ಅಭಿನಂದಿಸಿ ನ. 09 ರಂದು ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ಇವರಿಗೆ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಶ್ರೀಮತಿ ಶಾರದಾ – ಗ್ರಾಮ ಪಂಚಾಯತ್ ಅಧ್ಯಕ್ಷರು ಪಿಲಾತಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಕ್ಷ್ಮಿ ನಾರಾಯಣ ಹೆಗಡೆ , ಶ್ರೀಮತಿ ಪುಷ್ಪಲತಾ ಮೋಹನ್ ಸಾಲಿಯನ್, ಶ್ರೀಮತಿ ಲೀಲಾವತಿ ಶೆಟ್ಟಿ, ಶ್ರೀರಾಮ ಭಜನಾ ಮಂದಿರ ನೈನಾಡು ಇದರ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಶ್ರೀರಾಮ ಯುವಕ ಸಂಘದ ಗಣೇಶ್ ಹೆಗ್ಡೆ,
ಗೆಳೆಯರ ಬಳಗ ಸಂಸ್ಥೆಯ ಸಂಚಾಲಕರು ಎಲಿಯಸ್ ಕ್ರಾಸ್ತ , ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷರು ಪ್ರವೀಣ್ ಕುಮಾರ್ ಜಾರಿಗೆದಡಿ, ಗೌರವಾಧ್ಯಕ್ಷ ಪದ್ಮನಾಭ ರೈ, ಬ್ರಾಣಿಗೇರಿ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ನಾಯರ್ಮೇರು ಮುಂತಾದವರು ಇದ್ದರು.

ಶ್ರೀ ಸತ್ಯನಾರಾಯಣ ಪೂಜಾ ಸೇವಾ‌ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಪೂಜಾರಿ ನಾಯರ್ಮೇರು ಸಂಸ್ಥೆಯ ಹುಟ್ಟು-ಕಾರ್ಯವೈಖರಿಯ ಬಗ್ಗೆ ಪ್ರಾಸ್ತಾವಿಕಗೈದರು.
ಸಮಿತಿಯ ಪ್ರಧಾನ ಸಂಚಾಲಕ ಗಣೇಶ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಪ್ರದೀಪ್ ಪಿಂಟೊ ಸದಸ್ಯರು ಗೆಳೆಯರ ಬಳಗ ಕಾರ್ಯ ನಿರ್ವಹಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಪ್ರವೀಣ್ ಕ್ರಾಸ್ತ ವಂದಿಸಿದರು.

Related posts

ಕಲ್ಮಂಜ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾದರಿಯಾದ ಅಳದಂಗಡಿಯ ಹೇಮಚಂದ್ರ

Suddi Udaya

ನಿಡ್ಲೆ: ಬೂಡುಜಾಲು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya

ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಂಗೇರರ ಹೆಸರು,ಮುಖ್ಯಮಂತ್ರಿಗಳಿಂದ ಪೂರ್ಣ ಸಹಕಾರದ ಭರವಸೆ: ಕೃತಜ್ಞತೆ ಅರ್ಪಿಸಿದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ

Suddi Udaya

ನಾಳೆಯೂ(ಜು.26) ಶಾಲೆ, ಕಾಲೇಜುಗಳಿಗೆ ರಜೆ: ದ.ಕ ಜಿಲ್ಲಾಧಿಕಾರಿ ಘೋಷಣೆ

Suddi Udaya

ರಸ್ತೆಯಲ್ಲಿ ನಿಂತ ಮಳೆ ನೀರನ್ನು ಹಾರೆ ಹಿಡಿದು ಚರಂಡಿಗೆ ಬಿಡಿಸಿಕೊಟ್ಟತೆಕ್ಕಾರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್

Suddi Udaya
error: Content is protected !!