ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಹಾಯ ಹಸ್ತ –ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಮಾರಾಟ ಯೋಜನೆ

ಬೆಳ್ತಂಗಡಿ: ಶಿರಸಿಯಲ್ಲಿ ನ. 8 ಮತ್ತು 9ರಂದು ಇನ್ನರ್ ವೀಲ್ ಕ್ಲಬ್ ಆಯೋಜಿಸಿದ ಸಂಪ್ರೀತಿ ಕಾರ್ಯಕ್ರಮದಲ್ಲಿ, ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ದಿವ್ಯಾಂಗರು ಸ್ವಯಂ ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು, ಗೊಂಬೆಗಳು ಸೇರಿದಂತೆ ಹಲವು ವಿಧದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.

ಈ ಮಳಿಗೆಯನ್ನು ಸೌಜನ್ಯ ತೆಲಂಗ ರವರ ನೇತೃತ್ವದಲ್ಲಿ, ಶ್ರೀ ಕೃಷ್ಣರವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಆಯೋಜಿಸಲಾಯಿತು. ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಳಿಗೆಯ ಸಂಪೂರ್ಣ ನಿರ್ವಹಣೆಯನ್ನು ದಿವ್ಯಾಂಗರೇ ಮಾಡಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ರೂ.19,000/- ಮೌಲ್ಯದ ವ್ಯಾಪಾರ ನಡೆದಿದ್ದು, ಇದು ಕಾರ್ಯಕ್ರಮದ ಯಶಸ್ಸಿನ ಮತ್ತು ದಿವ್ಯಾಂಗರ ಆತ್ಮವಿಶ್ವಾಸದ ಸ್ಪಷ್ಟ ಉದಾಹರಣೆಯಾಗಿದೆ.

Related posts

ಕನ್ಯಾಡಿ ಕೆ. ವಿನಾಯಕ ರಾವ್ ರವರಿಗೆ ಉಡುಪಿ ಜಿಲ್ಲೆಯ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸನ್ಮಾನ

Suddi Udaya

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಸಂಸದರನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya

ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ, ಪೊಲೀಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ

Suddi Udaya

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

Suddi Udaya

ಸಹಾಯಕ ಆಯುಕ್ತರ ಕಚೇರಿಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

Suddi Udaya

ಗುರುವಾಯನಕೆರೆ ಕೆರೆ ಬಳಿ ಸೃಷ್ಟಿಯಾದ ಇನ್ನೊಂದು ಕೆರೆ, ರಾಜ್ಯ ಹೆದ್ದಾರಿಯಲ್ಲಿ ಮರಣ ಗುಂಡಿಗಳು, ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ಸಂಕಷ್ಟ,

Suddi Udaya
error: Content is protected !!