July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಪಿಕೋತ್ಸವ ಹಾಗೂ ಪ್ರೌಢಶಾಲೆಯ ಬೆಳ್ಳಿ ಮಹೋತ್ಸವದ ಸಮಾರೋಪ

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆ, ಹಳೆಕೋಟೆ ಇಲ್ಲಿಯ ಪ್ರೌಢಶಾಲೆಯ ಬೆಳ್ಳಿ ಮಹೋತ್ಸವದ ಸಮಾರೋಪ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮವು ನ.14ರಂದು ಶಾಲಾ ಆವರಣದಲ್ಲಿ ಜರುಗಿತು.

ವಾಣಿ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷ ಎಚ್. ಪದ್ಮ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವ ಅತಿಥಿಗಳಾಗಿ ಅಂಕಣಕಾರ ಆದರ್ಶ ಗೋಖಲೆ, ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಗಣೇಶ್ ಗೌಡ ಆಗಮಿಸಿದರು.

ವೇದಿಕೆಯಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಿನಾರಾಯಣ ಕೆ, ಶೇಖರ್ ಶೆಟ್ಟಿ, ಕೃಷ್ಣಪ್ಪ ಗೌಡ ದೇವಸ್ಯ, ಪ್ರಸಾದ್ ಕುಮಾರ್, ವಾಣಿ ಪಿಯು ಕಾಲೇಜು ಪ್ರಾಂಶುಪಾಲ ವಿಷ್ಣುಪ್ರಕಾಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಹಾಸಿನಿ ಎ, ಶಾಲಾ ವಿದ್ಯಾರ್ಥಿ ನಾಯಕಿ ಮನೀಷಾ ಎಂ.ಎನ್ ಉಪಸ್ಥಿತರಿದ್ದರು.

2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಿನಾರಾಯಣ ಕೆ ಪ್ರಸ್ತಾವಿಸಿ ಸ್ವಾಗತಿಸಿದರು. ಮನಿಷಾ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿಯರಾದ ವಿಜೇತಾ ಮತ್ತು ವಂದನಾ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಹಾಸಿನಿ ಎ ವಾರ್ಷಿಕ ವರದಿ ಮಂಡಿಸಿದರು.

Related posts

ಕಕ್ಕಿಂಜೆಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರು ಸಚಿವರಿಗೆ ಅಭಿನಂದನೆ

Suddi Udaya

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

Suddi Udaya

ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣಅವಿರೋಧ ಆಯ್ಕೆ

Suddi Udaya

ನನ್ನ ಸಮಾಜ ಸೇವೆಯೇ ನನಗೆ ಮುಳುವಾಯಿತು: ಬಳಂಜ ಶಾಲೆಯ ಘಟನೆ ಕುರಿತು ಪ್ರವೀಣ್ ಪೂಜಾರಿ ಲಾಂತ್ಯಾರು ಪ್ರತಿಕ್ರಿಯೆ

Suddi Udaya

ಪುದುವೆಟ್ಟು ಶಾಲೆಯಲ್ಲಿ ವಿಜ್ಞಾನ ಮಾದರಿಗಳ ತಯಾರಿಕಾ ಕಾರ್ಯಗಾರ

Suddi Udaya

ಸುದ್ದಿ ಉದಯ ಮಾಹಿತಿ ಪೋಸ್ಟರ್ ಅನಾವರಣ: ಸುದ್ದಿ ಉದಯ ಪತ್ರಿಕೆ ಅತ್ಯುತ್ತಮ ಗುಣಮಟ್ಟದೊಂದಿಗೆ ತಾಲೂಕಿನ ನಂಬರ್-1 ಪತ್ರಿಕೆಯಾಗಿ ಬೆಳೆಯುತ್ತಿದೆ: ಸಂಪತ್ ಬಿ. ಸುವರ್ಣ

Suddi Udaya
error: Content is protected !!