25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

ಬೆಳ್ತಂಗಡಿ: ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಆರಂಬೋಡಿಯ ಪ್ರತಾಪ್ ಶೆಟ್ಟಿ ಕುಂಡಾಜೆಯವರಿಗೆ “ಕ್ಷೀರಾರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರತಾಪ್ ಶೆಟ್ಟಿ ಕುಂಡಾಜೆಯವರು ಪ್ರಸ್ತುತ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದು, ಆರಂಬೋಡಿ ಗ್ರಾಮದ ಕುಂಡಾಜೆ ಶ್ರೀಮತಿ ಸುನಂದಾ ಮತ್ತು ಸಂಜೀವ ಶೆಟ್ಟಿ ದಂಪತಿ ಪುತ್ರ.

ಇವರು ಆಟೋಮೋಬೈಲ್ ವೃತ್ತಿ ಶಿಕ್ಷಣ ಪಡೆದಿದ್ದು, ಬೆಂಗಳೂರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅದನ್ನು ತ್ಯಜಿಸಿ ತನ್ನ ಊರಿಗೆ ಮರಳಿ ಕೃಷಿ ಮತ್ತು ಹೈನುಗಾರಿಕೆಯನ್ನು ಪ್ರಾರಂಭಿಸಿ ಪ್ರಸ್ತುತ ಪ್ರತಿ ದಿನಾ ಸರಾಸರಿ 100 ಲೀಟರ್‌ಗಿಂತಲು ಅಧಿಕ ಹಾಲನ್ನು ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪೂರೈಸುತ್ತಿದ್ದಾರೆ.

ಸುಮಾರು 15 ಉತ್ತಮ ಜಾತಿಯ ತಳಿಗಳನ್ನು ಸಾಕುತ್ತಿರುವ ಇವರು ಹೈನುಗಾರಿಕೆಯೊಂದಿಗೆ ಅಡಿಕೆ ಕೃಷಿ, ತೆಂಗು ಕೃಷಿಯನ್ನು ಮಾಡುತ್ತಿದ್ದೂ ಉಳಿದ ಯುವಕರಿಗೆ ಪ್ರತಾಪ್ ಶೆಟ್ಟಿ ಪ್ರೇರಣೆಯಾಗಿದ್ದಾರೆ. ಇವರಿಗೆ ಬೆಂಬಲವಾಗಿ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರುಗಳು ಸಾಥ್ ನೀಡುತ್ತಿದ್ದಾರೆ

Related posts

ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದಶ೯ನ

Suddi Udaya

ಕನ್ಯಾಡಿ 32 ಮತ್ತು 33 ಬೂತ್‌ಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠೆ

Suddi Udaya

ಧರ್ಮಸ್ಥಳ ಪ್ರಕರಣ -ದೂರುದಾರ ಚಿನ್ನಯ್ಯ ನೀಡಿದ ದೂರು ಸುಳ್ಳು : ಮಾನ್ಯ ಹೈಕೋರ್ಟ್ ನಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರ ವಾದ

Suddi Udaya

ಕಾಪಿನಡ್ಕದಲ್ಲಿ ಬೈಕ್ ಅಪಘಾತ, ಸವಾರಿಬ್ಬರಿಗೆ ಗಾಯ: ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಸರ್ವೆಯರ್ ವಿಶ್ವನಾಥ್ ರಾವ್ ಹೃದಯಾಘಾತದಿಂದ ಸಾವು

Suddi Udaya
error: Content is protected !!