25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೌತಡ್ಕ : ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ರವರ ಪುತ್ರಿಗೆ ಐಟಿ ಕಂಪೆನಿಯಲ್ಲಿ ಉದ್ಯೋಗ ದೊರಕಿಸಿಕೊಟ್ಟ ರಕ್ಷಿತ್ ಶಿವರಾo

ಬೆಳ್ತಂಗಡಿ: ಶ್ರೀ ಕ್ಷೇತ್ರ ಸೌತಡ್ಕದ ದೇವಸ್ಥಾನದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಶ್ರೀಮತಿ ಸುಜಾತಾ ಇವರ ಪತಿ ಬಾಲಕೃಷ್ಣ ಶೆಟ್ಟಿ ಇವರು ಇತ್ತೀಚೆಗೆ ಆನೆ ದಾಳಿ ಸಂದರ್ಭ ಮೃತ ಪಟ್ಟಿದ್ದು ಆ ಸಮಯ ರಾಜ್ಯ ಕೆ.ಪಿ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾo ಇವರು ಮನೆ ಬೇಟಿ ನೀಡಿದ ಸಂದರ್ಭ, ಮನೆಯವರು ಮತ್ತು ಗ್ರಾಮಸ್ಥರು ಮೃತ ಬಾಲಕೃಷ್ಣ ಶೆಟ್ರ ಪುತ್ರಿ ಕುಮಾರಿ ವೇದಿತಳಿಗೆ , ಉದ್ಯೋಗ ಮತ್ತು ಆನೇ ದಾಳಿಯಿಂದ ಮೃತ ಪಟ್ಟ ಬಗ್ಗೆ ಅರಣ್ಯ ಇಲಾಖೆ ಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ವಿನಂತಿಸಿದ್ದರು.

ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವಾರಂ ರವರು ಬೆಂಗಳೂರಿನ ಪ್ರಸಿದ್ಧ ಐಟಿ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ನ.17ರಂದು ಕುಮಾರಿ ವೇದಿತ ಅವರು ಐಟಿ ಉದ್ಯೋಗಿಯಾಗಿ ಕೆಲಸ ಸೇರುವಂತೆ ಸಂಸ್ಥೆಯು ಆದೇಶ ನೀಡಿರುತ್ತದೆ. ಅಲ್ಲದೆ ಅರಣ್ಯ ಇಲಾಖೆಯಿಂದ ಪರಿಹಾರವಾಗಿ ರೂ 20ಲಕ್ಷ ಮಂಜೂರಾತಿ ಗೊಳಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿ, ಪರಿಹಾರ ಒದಗಿಸಿದ ಮತ್ತು ಉದ್ಯೋಗವನ್ನು ದೊರಕಿಸಿಕೊಟ್ಟ ರಕ್ಷಿತ್ ಶಿವರಾಂ ಇವರಿಗೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ ಎಂದು ವ್ಯವಸ್ಥಾಪನ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya

ಶಿಶಿಲ: ಕೃಷಿಕ ಆನಂದ ಕೆದಿಲ್ಲಾಯ ನಿಧನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀ ಕ್ಷೇತ್ರ ಸೌತಡ್ಕಕ್ಕೆ ಹಸಿರು ಕಾಣಿಕೆ ಸಮರ್ಪಣೆ

Suddi Udaya

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೀದಿ ನಾಯಿ ಕಡಿತದ ಮತ್ತು ರೇಬಿಸ್ ರೋಗದ ಬಗ್ಗೆ ಮಾಹಿತಿ

Suddi Udaya
error: Content is protected !!