July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಇವರ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ವಾರ್ಷಿಕ ವಿಶೇಷ ಶಿಬಿರ 2025-26 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೇಡಿ (ಬುಳ್ಳೆಕ್ಕಾರ) ಇಲ್ಲಿ ಸಮಾಪ್ತಿಗೊಂಡಿತು.

“ಡಿಜಿಟಲ್ ಸಾಕ್ಷರತೆಗೆ ಯುವಜನತೆ – ನನ್ನ ಭಾರತಕ್ಕಾಗಿ ಯುವಜನತೆ” ಎಂಬ ಧ್ಯೇಯವಾಕ್ಯದಡಿ ಏಳು ದಿನಗಳ ಕಾಲ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಮಾರೋಪ ಭಾಷಣಕಾರರಗಿ ಮಾತನಾಡಿದ ಡಾ. ಸುಮನ ಶೆಟ್ಟಿ , ವಿಭಾಗ ಮುಖ್ಯಸ್ಥರು, ವಾಣಿಜ್ಯ ಶಾಸ್ತ್ರ, ಸ.ಪ್ರ.ದ. ಕಾಲೇಜು ಸಿದ್ದಕಟ್ಟೆ / ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಅವರು ಶಿಬಿರಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಶಿಬಿರದಲ್ಲಿ ಪಡೆದ ಅನುಭವವು ಭವಿಷ್ಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಆತಿಥ್ಯ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಅವರು ಶಿಬಿರಾರ್ಥಿಗಳ ಶಿಸ್ತು, ಉತ್ಸಾಹ ಹಾಗೂ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ಅವರು ಶಿಬಿರದ ಯಶಸ್ಸಿಗೆ ಕಾರಣರಾದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾಲೇಜಿನ ಪ್ರೊ. ಪದ್ಮನಾಭ ಕೆ., ವಿಭಾಗ ಮುಖ್ಯಸ್ಥರು, ವಾಣಿಜ್ಯ ವಿಭಾಗ, / ಸದಸ್ಯರು ರಾ.ಸೇ ಯೋಜನಾ ಸಲಹಾ ಸಮಿತಿ, ಶ್ರೀಮತಿ ವೈಲೆಟ್ ಮೋರಸ್ ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ ಕಾಲೇಜು ಬೆಳ್ತಂಗಡಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ , ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣಪ್ಪ ಉಜ್ಜಲ್, ಕುಕ್ಕೇಡಿ ಗ್ರಾ.ಪಂ. ಸದಸ್ಯ ಗೋಪಾಲ್ ಶೆಟ್ಟಿ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಸುಂದರ ಹೆಗ್ಡೆ, ಬೆಳ್ತಂಗಡಿ ಸ.ಪ್ರ.ದ. ಕಾಲೇಜು ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ , ಪ್ರೊಫೆಸರ್ ರಶ್ಮಿ ಹೆಚ್ ನಿರ್ವಾಣ ಶಾಸ್ತ್ರ ವಿಭಾಗ, ಪ್ರೊ. ರೋನಾಲ್ಡ್ ಪ್ರವೀಣ್ ಕೊರೆಯ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಘಟಕ–1 ಅವರು ಶಿಬಿರದ ವರದಿಯನ್ನು ಮಂಡಿಸಿದರು. ಪ್ರೊ. ಕವಿತ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಘಟಕ–2, ಶಿಬಿರದ ನಾಯಕ, ನಾಯಕಿಯರಾದ ಮನೀಶ್, ಕೃತೀಕ್ ತೇಜಾಕ್ಷಿ , ನೀಶಾ, ಶ್ರೀ ಶಾರದಾಂಭ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಂಜುಲೋಕ್ಕು, ಎಸ್.ಡಿ.ಎಮ್.ಸಿ ಸದಸ್ಯ ವಿಠಲ ದೇವಾಡಿಗರು, ಸಹ ಶಿಕ್ಷಕಿ ಶ್ರೀಮತಿ ಭಾಗ್ಯ ಜಿ.ಎಂ , ಅತಿಥಿ ಶಿಕ್ಷಕಿ ಶ್ರೀಮತಿ ಆಶಾಲತಾ ಉಪಸ್ಥಿತರಿದ್ದರು.


ಶಿಬಿರಾರ್ಥಿಗಳಾದ ಪ್ರಗತಿ, ಸುದೀಪ್ ಹಾಗೂ ಅನ್ವಿತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪುನೀತ್ ಮತ್ತು ಬಳಗ ಪ್ರಾರ್ಥನೆ ಸಲ್ಲಿಸಿದರು. ನಿರೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಪೂರ್ಣಿಮಾ ಸ್ವಾಗತಿಸಿ, ಅನನ್ಯ ಧನ್ಯವಾದ ಪ್ರಸ್ತಾವನೆ ಸಲ್ಲಿಸಿದರು. ಕುಕ್ಕೇಡಿ ಗ್ರಾಮದ ಗ್ರಾಮಸ್ಥರು, ಪೋಷಕರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Related posts

ವೇಣೂರು ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಉದ್ಘಾಟನೆ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ಅಧಿಕಾರ ಸ್ವೀಕಾರ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಇಂದು ಮಹಾ ಬ್ರಹ್ಮರಥೋತ್ಸವ

Suddi Udaya

ಲಾಯಿಲ ಕುಂಟಿನಿಯಿಂದ ನಡ, ಪುತ್ರಬೈಲು ಮೂಲಕ ಬೆಳ್ತಂಗಡಿ ಮತ್ತು ಕಿಲ್ಲೂರಿಗೆ ಸಂಪರ್ಕಿಸುವ ಕಿರಿದಾದ ಮಣ್ಣಿನ ಮತ್ತು ಕಾಂಕ್ರಿಟ್ ರಸ್ತೆ : ಭಾರೀ ಮಳೆಗೆ ರಸ್ತೆಯ ಎರಡು ಬದಿಗಳಲ್ಲಿ ಮಣ್ಣು ಕುಸಿದು ಅಪಾಯವನ್ನು ಆಹ್ವಾನಿಸುವ ಮುನ್ಸೂಚನೆ

Suddi Udaya

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya
error: Content is protected !!