24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ನಿಂದ “ನಿಮ್ಮ ಹಣ ನಿಮ್ಮ ಹಕ್ಕು” ‘ಅನ್ಕ್ಲೇಮ್ಡ್ ಡೆಪಾಸಿಟ್’ ಜಾಗೃತಿ ಅಭಿಯಾನ

ಮಂಗಳೂರು: ದೀರ್ಘಕಾಲದವರೆಗೆ ಕ್ಲೇಮ್ ಮಾಡದಿರುವ ಠೇವಣಿಗಳನ್ನು ಗುರುತಿಸಿ, ಅವುಗಳನ್ನು ಖಾತೆದಾರರಿಗೆ ಅಥವಾ ಅವರ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ‘ಅನ್ಕ್ಲೇಮ್ಡ್ ಡೆಪಾಸಿಟ್’ ಜಾಗೃತಿ ಅಭಿಯಾನ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಜಯಲಕ್ಷ್ಮಿ ಚಾಲನೆ ನೀಡಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಲೇಮ್ ಮಾಡದೇ ಒಟ್ಟು 633960 – ಖಾತೆಗಳಲ್ಲಿ 142.79 ಕೋಟಿ ರೂಪಾಯಿ ಇದ್ದು ,ಈ ಅಭಿಯಾನದ ಪ್ರಯೋಜನವನ್ನು ಸೂಕ್ತ ವಾರಸುದಾರರು ಪಡೆಯಲು ಸಹಕಾರಿ ಎಂದು ತಿಳಿಸಿದರು.
ಅಭಿಯಾನದಲ್ಲಿ ಬ್ಯಾಂಕರರಿಗೆ ವೇಗವಾಗಿ ಕ್ಲೇಮ್ ಇತ್ಯರ್ಥ ಮಾಡುವ ವಿಧಾನ, ಅಗತ್ಯ ದಾಖಲೆಗಳು, ಹಾಗೂ ಸರ್ಕಾರದ ಮಾರ್ಗಸೂಚಿಗಳ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಶ್ರೀಮತಿ ಕವಿತಾ ಎನ್ ಶೆಟ್ಟಿ ಮಾಹಿತಿ ನೀಡಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ಅಭಿಯಾನದ ಭಾಗವಾಗಿ ಒಟ್ಟು 359 ಖಾತೆಗಳನ್ನು ಕ್ಲೇಮ್ ಮಾಡಿ, ರೂ. 1.50 ಕೋಟಿ ಹಣವನ್ನು ಸಂಬಂಧಿಸಿದ ಮಾಲೀಕರು/ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ, ದೇಶಾದ್ಯಂತ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ವಿಶೇಷ ಅಭಿಯಾನವು ಬ್ಯಾಂಕಿಂಗ್, ವಿಮೆ ಹಾಗೂ ಸಂಬಂಧಿತ ವಲಯದ ಎಲ್ಲಾ ಶಾಖೆಗಳಲ್ಲಿ 31 ಡಿಸೆಂಬರ್ 2025 ರವರೆಗೆ ಮುಂದುವರಿಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಐಸಿ ಪ್ರತಿನಿಧಿಗಳು, ಹಾಗೂ ಜಿಲ್ಲಾ ಬ್ಯಾಂಕ್ ಸಂಯೋಜಕರು ಪಾಲ್ಗೊಂಡಿದ್ದರು.

Related posts

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸೇವಾದಳದ ಕಾರ್ಯದರ್ಶಿಯಾಗಿ ಎಂ.ಕೆ. ಅಬ್ದುಲ್ ಸಮದ್ ಕುಂಡಡ್ಕ ನೇಮಕ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ

Suddi Udaya

ವಾಣಿಜ್ಯ ವಿಭಾಗದ ಅಂತರ್ ಕಾಲೇಜು ಸ್ಪರ್ಧೆ: ನಡ ಪದವಿ ಪೂರ್ವ ಕಾಲೇಜಿಗೆ ಬಹುಮಾನ

Suddi Udaya

ಜ.4: ಗುರುವಾಯನಕೆರೆ ವಿದ್ವತ್ ಪಿ ಯು. ಕಾಲೇಜಿನಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ

Suddi Udaya

ಜಾನಪದ ಸ್ಫರ್ಧಾಕೂಟ: ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ಅಟ್ಟಳಿಗೆ ಸ್ತಂಭನ್ಯಾಸ ಕಾರ್ಯಕ್ರಮ

Suddi Udaya
error: Content is protected !!