37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ಅತಿಥಿ ತನ್ವೀರ್ ಅಹಮ್ಮದ್ ಉಲ್ಲಾ ಅವರಿಗೆ ರಸ್ತೆಯುದ್ದಕ್ಕೂ ಭವ್ಯ ಸ್ವಾಗತ

ಬೆಳ್ತಂಗಡಿ: ಸರ್ವಧರ್ಮ ಸಮ್ಮೇಳನದಲ್ಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯತೆಯ ಬಗ್ಗೆ ಉಪನ್ಯಾಸ ನೀಡಲಿರುವ ತನ್ವೀರ್ ಅಹಮ್ಮದ್ ಉಲ್ಲಾ ಅವರು ಪಾದಯಾತ್ರೆ ಮೂಲಕ ಬೆಂಗಳೂರಿನಿಂದ ಆಗಮಿಸಿದವರನ್ನು ಚಾರ್ಮಾಡಿಯಲ್ಲಿ ಸ್ವಾಗತಿಸಲಾಯಿತು.

ಗ್ರಾ. ಯೋ. ಜಿಲ್ಲಾ ನಿರ್ದೇಶಕ ದಿನೇಶ್, ತಾಲೂಕು‌ ಯೋಜನಾಧಿಕಾರಿ ಯಶೋಧರ, ಮೇಲ್ವಿಚಾರಕ ಜನಾರ್ದನ ಆಚಾರ್ಯ ಮತ್ತು ಗಣೇಶ್, ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಡಿ.ಎ ರಹಿಮಾನ್, ಭಜನಾ ಪರಿಷತ್ ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಸೇವಾ ಪ್ರತಿನಿಧಿಗಳಾದ ಸರಿತಾ, ಅನಿತಾ, ವಿಜಿತಾ, ಕವಿತಾ, ಚೇತನಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ‌ ಹಿರಿಯ ಸದಸ್ಯ ಅನಂತರಾವ್ ಚಾರ್ಮಾಡಿ ಮನೆಗೆ ಭೇಟಿ ನೀಡಿದ ಅವರನ್ನು ಅವರ ಪುತ್ರ ಪ್ರಕಾಶ್ ರಾವ್ ಶಾಲು ಹೊದಿಸಿ ಗೌರವಿಸಿದರು. ತನ್ವೀರ್ ಅವರೂ ಅನಂತ ರಾವ್ ಅವರನ್ನು ಅಭಿನಂದಿಸಿದರು.

ದಾರಿ‌ ಮಧ್ಯೆ ಬೀಟಿಗೆ ಮತ್ತು ಚಾರ್ಮಾಡಿ‌ ಮಸೀದಿಯನ್ನು ಸಂದರ್ಶಿಸಿದರು. ಅಲ್ಲಿಂದ ಮುಂಡಾಜೆಗೆ ಆಗಮಿಸಿದ ವೇಳೆ ಸೋಮಂತಡ್ಕ ಪೇಟೆಯಲ್ಲಿ ಅವರನ್ನು ಸ್ವಾಗತಿಸಲಾಯಿತು. ನಾಮದೇವ ರಾವ್ ಮುಂಡಾಜೆ, ಚೆನ್ನಕೇಶವ ಅರಸಮಜಲು, ಸೇವಾ ಪ್ರತಿನಿಧಿಗಳಾದ ಜಿಶಾ, ಸರಿತಾ, ರಶ್ಮಿ, ಸುರೇಖಾ, ಲೀಲಾವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಲಿಂದ ನಿಡಿಗಲ್ ಮಾರ್ಗವಾಗಿ ಉಜಿರೆಗೆ ಆಗಮಿಸಿ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ಡಯಾಲಿಸಿಸ್ ಕೇಂದ್ರವನ್ನೂ ವೀಕ್ಷಿಸಿ ಕ್ಷೇತ್ರದ ಸೇವಾ ವಿಶೇಷತೆಗಳ ಬಗ್ಗೆ ತಿಳಿದುಕೊಂಡರು.

ಉಜಿರೆಯ ಓಶಿಯನ್ ಪರ್ಲ್ ನಲ್ಲಿ ತಂಗಿದ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಿದ್ದಾರೆ.

ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ, ಅಂಕಣಕಾರರಾಗಿ, ಕವಿಯಾಗಿ ಬಹುವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ತನ್ವೀರ್ ಅಹಮದ್ ಉಲ್ಲಾ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ, ಸರ್ವಧರ್ಮ ಸಮ್ಮೇಳನದ ಮೊದಲ ಅತಿಥಿಯಾಗಿ ಗುರುತಿಸಲ್ಪಟ್ಟಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕೊಳಂಬೆ ಕಿರುಚಿತ್ರ “ರೆಡ್ ಇನ್ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2025” ಪ್ರಶಸ್ತಿಗೆ ಆಯ್ಕೆ

Suddi Udaya

ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಬೆಳ್ತಂಗಡಿ ನವೋದಯ ಪ್ರೌಢಶಾಲೆ ಮತ್ತು ಲಾಯಿಲ ಬಿ.ಇಡಿ ಕಾಲೇಜಿನ ನಿವೃತ್ತ ಗೌರವ ಪ್ರಾಧ್ಯಾಪಕ ಪಿ ವೆಂಕಟರಮಣ ನಿಧನ

Suddi Udaya

ಪಡಂಗಡಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ-ಸಾಧಕರಿಗೆ ಗೌರವ ಸನ್ಮಾನ

Suddi Udaya

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಕ್ರೀಡಾ ಛಾಂಪಿಯನ್ ಶಿಪ್ ನ್ನು ಉದ್ಘಾಟಿಸಿದ ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್

Suddi Udaya
error: Content is protected !!