September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರೂ.10 ಲಕ್ಷ ವಿದ್ಯಾರ್ಥಿ ವೇತನ

ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಂಗಳೂರು ರೋಟರಿ ಇಂದಿರಾ ನಗರ ಸಹಭಾಗಿತ್ವದಲ್ಲಿ ರೂ. 10,80,000/- ವಿದ್ಯಾರ್ಥಿ ವೇತನವನ್ನು, ಬೆಳ್ತಂಗಡಿ ತಾಲೂಕಿನ 270 ಅರ್ಹ ಪಿಯು ವಿದ್ಯಾರ್ಥಿಗಳಿಗೆ ತಲಾ ರೂ 4000/-ದಂತೆ ನೀಡಲಿದೆ.

ಈ 10,80,000/- ಮೊತ್ತದಲ್ಲಿ, ಬೆಂಗಳೂರು ರೋಟರೀ ಇಂದಿರಾ ನಗರದ ಕೊಡುಗೆ 8,10,000/-, ರೋಟರೀ ಕ್ಲಬ್ ಬೆಳ್ತಂಗಡಿ ಕೊಡುಗೆ 1,70,000/-, ಮತ್ತು ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ (ರಿ) ಕೊಡುಗೆ ರೂ. ಒಂದು ಲಕ್ಷ ಇರಲಿದೆ.


ನ.25 ರಂದು ರೋಟರೀ ಭವನದಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುಗಳು ವಹಿಸಲಿರುವರು. ಉದ್ಘಾಟನೆಯನ್ನು ಬೆಂಗಳೂರು ರೋಟರಿ ಇಂದಿರಾನಗರದ ಮಾಜಿ ಅಧ್ಯಕ್ಷ ರೋ. ಜಗದೀಶ ಮುಗುಳಿ ಮಾಡಲಿರುವರು. ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ ಇದರ ಅಧ್ಯಕ್ಷ ಶ್ರೀಧರ ಪಡ್ವೆಟ್ನಾಯ, ರೋಟರಿ ಜಿಲ್ಲೆ 3181 ಇದರ ಮುಂದಿನ ವರ್ಷದ ಜಿಲ್ಲಾಧ್ಯಕ್ಷ ರೊ. ಸತೀಶ್ ಬೋಳಾರರು ಮುಖ್ಯ ಅತಿಥಿಗಳಾಗಿಯೂ, ಉಜಿರೆ ಸಂಧ್ಯಾ ಫ್ರೆಶ್ ಮಾಲಕ ರಾಜೇಶ ಪೈ, ಅಸಿಸ್ಟೆಂಟ್ ಗವರ್ನರ್ ರೊ. ಡಾ ಎ.ಜಯಕುಮಾರ ಶೆಟ್ಟಿ, ವಲಯ ಸೇನಾನಿ ರೊ. ಸುರೇಶ ಸಾಲಿಯಾನ್, ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ ರೋ. ಶ್ರೀಕಾಂತ ಕಾಮತ್, ಸ್ಕಾಲರ್ ಶಿಪ್ ಸಮಿತಿಯ ಚೆಯರ್ ಮ್ಯಾನ್ ರೊ. ಅಬೂಬಕ್ಕರ್ ಯು.ಎಚ್ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ತಮ್ಮ ಪ್ರಕಟಣೆಯಲ್ಲಿ ಪ್ರೊ. ಪ್ರಕಾಶ ಪ್ರಭು ತಿಳಿಸಿದ್ದಾರೆ.

Related posts

ನಾವೂರು ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಅಧ್ಯಕ್ಷ ದೀಪಕ್ ಜಿ. ರವರಿಗೆ ಸಮಾಜ ರತ್ನ ಪ್ರಶಸ್ತಿ

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya

ಕೋರಂ ಕೊರತೆ ಹಾಗೂ ಇಲಾಖಾಧಿಕಾರಿಗಳ ಗೈರುಹಾಜರಿಯಲ್ಲಿ ರದ್ದುಗೊಂಡ ಮಡಂತ್ಯಾರು ಗ್ರಾಮಸಭೆ

Suddi Udaya

ಬೆಳ್ತಂಗಡಿ ಗಮಕ ಕಲಾ ಪರಿಷತ್ ವತಿಯಿಂದ ಪ. ರಾಮಕೃಷ್ಣ ಶಾಸ್ತ್ರಿ ದಂಪತಿಗಳಿಗೆ ಗೌರವಾರ್ಪಣೆ

Suddi Udaya

ಜೂ.17: ಉಜಿರೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಥಾ ಕಾರ್ಯಕ್ರಮ

Suddi Udaya
error: Content is protected !!