25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

‘ವಿಕಸಿತ ಭಾರತ : ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚರಿಗೆ ಆಹ್ವಾನ

ಉಜಿರೆ: ಅಬ್ದುಲ್ ನಜೀರ್ ಸಾಬ್ ಪಂಚಾಯತ್ ರಾಜ್ ಪೀಠ, ಸಿ.ಎಂ.ಡಿ.ಆರ್ ಸಂಸ್ಥೆ ಧಾರವಾಡ ವತಿಯಿಂದ ಹಮ್ಮಿಕೊಂಡಿರುವ ‘ವಿಕಸಿತ ಭಾರತ @ 2047 ಸಾಧಿಸಲು ಗ್ರಾಮ ಪಂಚಾಯತ್ ಗಳ ಪಾತ್ರ” ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಯವರಿಗೆ ಆಹ್ವಾನ ಬಂದಿರುತ್ತದೆ.


ಸೆಂಟರ್ ಫಾರ್ ಮಲ್ಟಿ-ಡಿಸ್ಸಿಪ್ಲಿನರಿ ಡೆವಲಪ್ಟಂಟ್ ರಿಸರ್ಚ್ ಸಂಸ್ಥೆ ಧಾರವಾಡ, ರಾಷ್ಟ್ರ ಮಟ್ಟದ ಸಂಶೋಧನಾ ಸಂಸ್ಥೆಯಾದ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ ನವದೆಹಲಿ ಇದರ ಒಂದು ಅಂಗ ಸಂಸ್ಥೆಯಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಇನ್ನಿತರ ವಿಷಯಗಳ ಕುರಿತು ಅನೇಕ ಸಂಶೋಧನಾ ಅಧ್ಯಯನ, ವಿಚಾರ ಸಂಕಿರಣ, ಮತ್ತು ತರಬೇತಿ ಕಾರ್ಯಕ್ರಮವನ್ನು ಕೈಗೊಂಡಿರುತ್ತದೆ. ನ. ೨೦, ೨೧ ರಂದು ೨ ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ಈ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳ ಪಂಚಾಯತ್ ರಾಜ್ ತಜ್ಞರು, ಅಧಿಕಾರಿಗಳು, ಎನ್‌ಜಿಓ ಪ್ರತಿನಿಧಿಗಳು ಮತ್ತು ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ, ಗ್ರಾಮ ಪಂಚಾಯತಿಯಲ್ಲಿ ಕೈಗೊಂಡಿರುವ ವಿನೂತನ ಮತ್ತು ಮಾದರಿ ಕಾರ್ಯಕ್ರಮಗಳನ್ನು ಈ ವಿಚಾರ ಸಂಕಿರಣ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಹಂಚಿಕೊಳ್ಳಲಿದ್ದಾರೆ.

Related posts

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

Suddi Udaya

ಅ.27-28 : ಸ.ಉ.ಹಿ.ಪ್ರಾ. ಶಾಲೆ ಬಜಿರೆಯಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನಾ ಸಮಿತಿ ರಚನೆ

Suddi Udaya

ಮಚ್ಚಿನ: ತೀರಾ ವಯೋಸಹಜದ ಲಿಲ್ಲಿ ಬಾಯಿಯವರಿಂದ ಮತದಾನ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಗುರುವಾಯನಕೆರೆ ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

Suddi Udaya

ಧಮ೯ಸ್ಥಳ: ದೂರುದಾರನ ಜೊತೆ ಬೊಳಿಯಾರ್ ನ ಹೊಸ ಜಾಗಕ್ಕೆ ಬಂದ ಎಸ್ ಐಟಿ ತಂಡ

Suddi Udaya
error: Content is protected !!