ಗುರುವಾಯನಕೆರೆ: ಹೆದ್ದಾರಿ ಕಾಮಗಾರಿ ಯಂತ್ರದ ಅಡಿಗೆ ಸಿಲುಕಿ ವೃದ್ಧರೋರ್ವ ಸಾವನ್ನಪ್ಪಿದ ಘಟನೆ ನ.20 ರಂದು ಮದ್ದಡ್ಕದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮದ್ದಡ್ಕ ಮಸೀದಿ ಸಮೀಪದ
ಹೆದ್ದಾರಿಯ ಕಾಮಗಾರಿ ನಡೆಸುವ ವೇಳೆ ವೃದ್ಧನೋರ್ವ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಕಾಮಗಾರಿ ಯಂತ್ರದ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೃತರು ಬೆಳ್ತಂಗಡಿ ತಾಲೂಕಿನ ಕಾಜೂರು ಎಂಬಲ್ಲಿನ ನಿವಾಸಿ ಎಂದು ತಿಳಿದು ಬಂದಿರುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.











