ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ ಉಜಿರೆ ಇದರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಪೌಷ್ಟಿಕ ಆಹಾರ & ಆರೋಗ್ಯ ” ಕಾರ್ಯಕ್ರಮವನ್ನು ದ. ಕ. ಜಿ. ಪಂ. ಉ. ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಲಾಯಿಲ ಬೆಳ್ತಂಗಡಿ ಇಲ್ಲಿ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರಪತಿ ಯೋಗಿಕ್ ಸೈನ್ಸ್ ಕಾಲೇಜಿನ ಡಾ. ಭಾಷಿಣಿ (BNYS) ಸಂಪನ್ಮೂಲ ವ್ಯಕ್ತಿ ಆಗಮಿಸಿದ್ದರು.
ಶ್ರೀಮತಿ ಲೀನಾ ಡಿಸೋಜ ಪ್ರಭಾರ ಮುಖ್ಯ ಶಿಕ್ಷಕರು ಕರ್ನೋಡಿ ಶಾಲೆ ಲಾಯಿಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಕುಮಾರ್ ಪ್ರೌಢ ಶಾಲಾ ಸಹ ಶಿಕ್ಷಕರು ಕರ್ನೋಡಿ ಶಾಲೆ ಲಾಯಿಲ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾದ ಡಾ.ಭಾಷಿಣಿ ರವರು “ಆಹಾರ ಮತ್ತು ಪೌಷ್ಟಿಕತೆ ಆರೋಗ್ಯಕರ ಜೀವನದ ಮೂಲಧಾರ. ಸರಿಯಾದ ಪ್ರಮಾಣದ ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಬಹುದು. ಜೊತೆಗೆ ಯೋಗಭ್ಯಾಸದ ಬಗ್ಗೆಯೂ ಮಾಹಿತಿ ನೀಡಿದರು.
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಅಖಿಲೇಶ್, ಬಿಂದು ಬಿ ಆರ್, ಸ್ಮೃತಿ ಆರ್, ಹರ್ಷಿತಾ ಕೆ ಎಸ್ ರವರು ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟರು.











