22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಪಂಚಾಯತ್ ನಲ್ಲಿ ಉಚಿತ ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಚಾರ್ಮಾಡಿ: ಆರ್ ಸಿ.ಸಿ ಚಾರ್ಮಾಡಿ- ಕಕ್ಕಿಂಜೆ ಮತ್ತು ಆರ್ ಸಿ.ಸಿ ನೆರಿಯ ಇವರು ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರದಿಂದ ಚಾರ್ಮಾಡಿಯ ಪಂಚಾಯತ್ ನಲ್ಲಿ, ಏಕ ಕಾಲದಲ್ಲಿ ಉಚಿತ ದಂತ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣ ಶಿಬಿರ ಇಂದು (ನ.22) ಏರ್ಪಡಿಸಿತು.


ಉಚಿತ ಆರೋಗ್ಯ ತಪಾಸಣಾ ಶಿಬಿರ ಎಸ್. ಡಿ. ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ, ಧರ್ಮ ರಕ್ಷಣಾ ವೇದಿಕೆ ಬೆಂದ್ರಾಳ ತೋಟತ್ತಾಡಿ ಈ ಸಂಸ್ಥೆಗಳ ಸಹಕಾರದಿಂದ ನಡೆಯಿತು ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ, ಕೆವಿಜಿ ದಂತ ಕಾಲೇಜು ಮತ್ತು ಆಸ್ಪತ್ರೆ, ಧರ್ಮ ರಕ್ಷಣಾ ವೇದಿಕೆ ಬೆಂದ್ರಾಳ ತೋಟತ್ತಾಡಿ ಈ ಸಂಸ್ಥೆಗಳ ಸಹಕಾರದಿಂದ ನಡೆಯಿತು.

ಬೆಳ್ತಂಗಡಿ ರೋಟರೀ ಕ್ಲಬ್ ಅಧ್ಯಕ್ಷರಾದ ಪ್ರೊ. ಪ್ರಕಾಶ ಪ್ರಭುಗಳು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಛಾಟನೆ ನೆರವೇರಿಸಿ, ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು. ಮುಂಡಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶ್ರೀ ಪ್ರಕಾಶ ನಾರಾಯಣರು ತಾ23ರಂದು ಸೋಮತಡ್ಕದಲ್ಲಿ ನಡೆಯುವ ಉಚಿತ ಕಣ್ಣಿನ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆಯ ಅಧ್ಯಕ್ಯರಾದ ಡಾ ಆಶಾ ಪಿದಮಲೆಯವರು ಹಲ್ಲಿನ ಆರೋಗ್ಯ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೇಳಿದರು. ಎಸ್.ಡಿ.ಎಂ ವೈದ್ಯಕೀಯ ಸಂಘದ ವೈದ್ಯಕೀಯ ಪ್ರತಿನಿಧಿ ಡಾ ದೇವೇಂದ್ರ, ಡಾ. ರೋಹನ್ ದೀಕ್ಷಿತ್, ಡಾ.ಭವಿಷ್ಯ ಇವರು ಉಚಿತ ಆರೋಗ್ಯ ತಪಾಸಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕೊಟ್ಟರು. ಕೆವಿಜಿ ಕಾಲೇಜಿನ ಪೆರಿಯೋಡಾಂಟಿಕ್ಸ ವಿಭಾಗದ ಮುಖ್ಯಸ್ಥ ಡಾ.ಎಂ ಎಂ ದಯಾಕರ್ ಅವರು ಉಚಿತ ದಂತ ಚಿಕಿತ್ಸೆಗೆ ಸಂಬಂಧ ಪಟ್ಟ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಆರ್ ಸಿ ಸಿ ಚಾರ್ಮಾಡಿ-ಕಕ್ಕಿಂಜೆ ಇದರ ಅಧ್ಯಕ್ಷೆ ಶ್ರೀಮತಿ ಶಾರದಾರವರು, ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಆರ್ ಸಿ ಸಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸಿದೆ. ಊರವರು ತನಗೆ ಪೂರ್ಣ ಸಹಕಾರ ನೀಡುತ್ತಾರೆ ಎಂದರು.
ಧರ್ಮ ರಕ್ಷಣಾ ವೇದಿಕೆ ಬೆಂದ್ರಾಳ ತೋಟತ್ತಾಡಿ ಅಧ್ಯಕ್ಷ ಶ್ರೀ ಪ್ರಸಾದ, ಕೆವಿಜಿ ದಂತ ಕಾಲೇಜಿನ ವೈದ್ಯೆ ಡಾ ಅನಿತಾ, ಪಿ.ಆರ್.ಓ ಶ್ರೀ ಜಯಂತ, ಉಪಸ್ಥಿತರಿದ್ದರು.
ಇಡೀ ಕಾರ್ಯಕ್ರಮದ ಮುಖ್ಯ ಸಂಚಾಲಕ ಓಬಯ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಪಟ್ರಮೆ ಕಲ್ಲರಿಗೆ ನಿವಾಸಿ ಸದಾಶಿವ ದಾಸ್ ನಿಧನ

Suddi Udaya

ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

Suddi Udaya

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ನೂತನ ವಾಸ್ತವ್ಯದ ಮನೆ, ಸಭಾಭವನ ಉದ್ಘಾಟನೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಭಿನ್ನಮತ ಸ್ಫೋಟ: ಎರಡು ಬಣಗಳ ನಡುವೆ ಮಾತಿನ ಚಕಮಕಿ: ಬೆಳ್ತಂಗಡಿ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬುಗಿಲೆದ್ದ ಭಿನ್ನಮತ

Suddi Udaya

ಚಾರ್ಮಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸದಾಶಿವ ಕೆವುಟಾಜೆ ಆಯ್ಕೆ

Suddi Udaya
error: Content is protected !!