25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲದಲ್ಲಿ ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆ ಉದ್ಘಾಟನೆ

ಬೆಳ್ತಂಗಡಿ : ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡ ಮೊಬಿನ್ಸ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿಯವರು ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆಯನ್ನು ಲಾಯಿಲ ಗ್ರಾಮದಲ್ಲಿ ತೆರೆದಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಅರವಿಂದ ಲಾಯಿಲ, ಗಣೇಶ್ ಆರ್, ನಗರ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ,ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್ ಎಂ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸದರಿ ಕಂಪನಿಯಿಂದ ಖರೀದಿ ಮಾಡಿದ ಆಯ್ದ ಯಂತ್ರೋಪಕರಣಗಳಿಗೆ ಕೃಷಿ/ತೋಟಗಾರಿಕೆ ಇಲಾಖೆಯಿಂದ ಸಹಾಯಧನವು ಲಭ್ಯವಿದ್ದು ಇಂದು ಅರ್ಜಿ ಹಾಕಿದ ಅರ್ಹ 60 ಜನ ರೈತ ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಅಡಿಕೆ ಮರ ಹತ್ತುವ ಯಂತ್ರೋಪಕರಣಗಳನ್ನು ಪ್ರಾತ್ಯಕ್ಷಿತೆ ನೀಡಿ ವಿತರಿಸಲಾಯಿತು.

Related posts

ನಿಡ್ಲೆ: ವಿಶ್ವನಾಥ ಪೂಜಾರಿ ನಿಧನ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ವಕೀಲರ ನಿಯೋಗದಿಂದ ವಿ.ಪ. ಶಾಸಕ ಐವನ್ ಡಿ ಸೋಜಾ ರವರ ಭೇಟಿ, ಹೊಸ ನ್ಯಾಯಾಲಯ ಸಂಕೀರ್ಣದ ಕಾಮಗಾರಿಯ ಬಗ್ಗೆ ಚರ್ಚೆ

Suddi Udaya

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿ ನೂತನ ಆಡಳಿತ ಸಮಿತಿ ರಚನೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆಯ ವಲಯದ ಮಾಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸಂಘ ರಚನೆ

Suddi Udaya
error: Content is protected !!