23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಆಚರಣೆ – ಸಿಯೋನ್ ಆಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 77ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಿಯೋನ್ ಆಶ್ರಮಕ್ಕೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ವತಿಯಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಹುಟ್ಟುಹಬ್ಬದ ಕೇಕ್ ಕತ್ತರಿಸಿ, ಆಶ್ರಮ ನಿವಾಸಿಗಳಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಯೋಜನಾಧಿಕಾರಿ ಸುರೇಶ್ ಮಾತನಾಡಿ, ಹೆಗ್ಗಡೆಯವರ ಮಾನವಸೇವೆ ಮತ್ತು ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಸ್ಪೂರ್ತಿದಾಯಕವೆಂದು ಹೇಳಿದರು. ಸಿಯೋನ್ ಆಶ್ರಮದೊಂದಿಗೆ ಇರುವ ಬಾಂಧವ್ಯವನ್ನು ಸ್ಮರಿಸಿಕೊಂಡ ಅವರು, ಆಶ್ರಮದ ಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ. ಯು.ಸಿ. ಪೌಲೋಸ್ ರವರು ಪೂಜ್ಯರ ಸೇವಾಧರ್ಮ ಮತ್ತು ಸಮಾಜೋದ್ಧಾರದ ಕಾರ್ಯವೈಖರಿಯನ್ನು ಸಂಕ್ಷಿಪ್ತವಾಗಿ ವಿವರಿಸಿ, ಶ್ರೀ ಕ್ಷೇತ್ರದಿಂದ ದೊರೆಯುತ್ತಿರುವ ಸಹಕಾರವು ಆಶ್ರಮದ ಸೇವಾ ಕಾರ್ಯಗಳಿಗೆ ಬಲವರ್ಧಕವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಯೋಜನಾಧಿಕಾರಿ ಮಂಜುನಾಥ, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ, ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಅಮೃತ, ಜನಜಾಗೃತಿ ಮಾಜಿ ಅಧ್ಯಕ್ಷ ಡಿ.ರಹಿಮಾನ್, ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯರಾದ ಶ್ರಿಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ., ಮುಂಡಾಜೆ ವಲಯ ಮೇಲ್ವಿಚಾರಕರಾದ ಗಣೇಶ್, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸಿಯೋನ್ ಆಶ್ರಮದ ಸಿಬ್ಬಂದಿಗಳು, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಿಯೋನ್ ಸಿಬ್ಬಂದಿ ಶ್ರೀಮತಿ ದಿನಾವತಿಯವರು ಕಾರ್ಯಕ್ರಮ ನಿರೂಪಿಸಿದರು.

Related posts

ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಮುಂಬಯಿ ಅಜೆಕಾರು ಕಲಾಭಿಮಾನಿಗಳ ಬಳಗದಿಂದ ಯಕ್ಷಗಾನ ಪ್ರದರ್ಶನ: ಉಜಿರೆ ಮಾ| ಆದಿತ್ಯ ಹೊಳ್ಳ ರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠೆ

Suddi Udaya

ಗುರುವಾಯನಕೆರೆ: ಎಸ್.ಎಸ್.ಎಫ್. ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ವೇಣೂರು: ರಾಜೇಶ್ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!