ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭಕ್ತಾದಿಗಳ ಉಪಯೋಗಕ್ಕಾಗಿ ಎಲ್ ಐ ಸಿ ಉಡುಪಿ ವಿಭಾಗದಿಂದ ಬ್ಯಾರಿಕೇಡ್ ಹಾಗೂ ಗಡಿಯಾರಗಳನ್ನು ಕೊಡುಗೆಯಾಗಿ ನ.25ರಂದು ನೀಡಲಾಯಿತು.

ಎಲ್ ಐ ಸಿ ದಕ್ಷಿಣ ಮಧ್ಯ ವಿಭಾಗದ ಜೋನಲ್ ಮ್ಯಾನೇಜರ್ ಹಾಗೂ ಇ ಡಿ ಪುನೀತ್ ಕುಮಾರ್ ಕೊಡುಗೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯರಿಗೆ ಹಸ್ತಾಂತರಿಸಿದರು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ ಐ ಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್ ಭಟ್, ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್, ಮಾರಾಟ ಅಧಿಕಾರಿ ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಸಂಪರ್ಕ ಶಾಖಾಧಿಕಾರಿ ಪ್ರಕಾಶ್ ಕುಮಾರ್, ಉಡುಪಿ ವಿಭಾಗದ ಶ್ಯಾಮ್ ಸುಂದರ್, ಅಭಿವೃದ್ಧಿ ಅಧಿಕಾರಿ ಉದಯಶಂಕರ್, ಅರ್ಚಕರು ಸುಬ್ರಹ್ಮಣ್ಯ ಉಪ್ಪಾರ್ಣ ಉಪಸ್ಥಿತರಿದ್ದರು.
ದೇವಳದ ವತಿಯಿಂದ ಪುನೀತ್ ಕುಮಾರ್ ಹಾಗೂ ಗಣಪತಿ ಎನ್ ಭಟ್ಟರನ್ನು ಗೌರವಿಸಲಾಯಿತು. ಸುಬ್ರಹ್ಮಣ್ಯ ಶಬರಾಯರು ದೇವಳದ ಪರವಾಗಿ ಕೃತಜ್ಞತೆ ಸಲ್ಲಿಸಿದರು.











