23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳ್ಳಮಂಜ : ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ: ಕಣ್ಮಣ ಸೆಳೆದ ಬ್ರಹ್ಮರಥೋತ್ಸವ

ಬಳ್ಳಮಂಜ: ತುಳುನಾಡಿನ ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಬಳ್ಳಮಂಜ. ಈ ಕ್ಷೇತ್ರದ ಸೊಬಗಿಗೆ ತಕ್ಕಂತೆ ಇಲ್ಲಿ ಶ್ರೀ ಅನಂತೇಶ್ವರ ದೇವರ ದಿವ್ಯ ಸನ್ನಿಧಿ ಇದ್ದು, ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುವ ಶ್ರದ್ದಾ ಕೇಂದ್ರವಾಗಿರುತ್ತದೆ. ತುಳುನಾಡಿನ ಇತಿಹಾಸದ ಪ್ರಕಾರ ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ವ್ಯಾಖ್ಯಾನಿಸುತ್ತಾರೆ. ವರ್ಷಂಪ್ರತಿಯಂತೆ ಜರಗುವ ಷಷ್ಠಿ ಮಹೋತ್ಸವ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸೇರುವಿಕೆಯಿಂದ ಕಣ್ಮಣ ಸೆಳೆದ ಬ್ರಹ್ಮರಥೋತ್ಸವ ನಡೆಯಿತು.

ನ. 26ರಂದು ಬೆಳಿಗ್ಗೆ 7ರಿಂದ ಷಷ್ಠಿ ಉತ್ಸವ ಪ್ರಾರಂಭಗೊಂಡು ಗಂಟೆ 11ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಅಪರಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಡಾ. ಎಂ. ಹರ್ಷ ಸಂಪಿಗೆತ್ತಾಯ, ಶಾಸಕ ಹರೀಶ್ ಪೂಂಜಾ, ಶಿವಪ್ರಸಾದ್ ತಂತ್ರಿ,ಅರ್ಚಕ ವೃಂದ, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿದರು.

ರಾತ್ರಿ 7ಕ್ಕೆ ಕಟ್ಟೆ ಪೂಜೆ, ದರ್ಶನ ಬಲಿ ನಡೆಯಲಿದೆ.

Related posts

ಗುರುವಾನಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya

ಉಜಿರೆ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ

Suddi Udaya

ಮಚ್ಚಿನ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಮಿಯ ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ ನಲ್ಲಿ ಮಾನ್ಸೂನ್ ದರ ಕಡಿತ ಮಾರಾಟ,10% ರಿಂದ 50% ಡಿಸ್ಕೌಂಟ್ ಸೇಲ್

Suddi Udaya

ಪುದುವೆಟ್ಟು ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ.ಎಸ್ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya
error: Content is protected !!