September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸೆಲ್ ಕಾಲೇಜಿನಲ್ಲಿ “ಅಕ್ಷರೋತ್ಸವ ” ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಗುರುವಾಯನಕೆರೆ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯೊಂದಿಗೆ ಪ್ರಸಿದ್ದಿ ಪಡೆದಿರುವ ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಎಕ್ಸೆಲ್ ಅಕ್ಷರೋತ್ಸವ 2025,ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವು ನ 27 ರಂದು ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ನಡೆಯಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಭಾಷೆ ಮತ್ತು ಸಂಸ್ಕೃತಿಗೆ ನೇರ ಸಂಬಂಧವಿದೆ. ಭಾಷೆ ಉಳಿದರೆ ದೇಶ ಸಂಪತ್ಭರಿತವಾಗಿರುತ್ತದೆ. ಅಕ್ಷರಭ್ಯಾಸ ಆರಂಭದ ಸ್ಥಿತಿಯಾದರೆ,ವಿದ್ಯಾಭ್ಯಾಸ ನಂತರದ ಸ್ಥಿತಿ.ವಿದ್ಯೆ ಬದುಕು ಕಟ್ಟಿಕೊಳ್ಳಲು ಪೂರಕವಾಗಿರಬೇಕು ಎಂದು ಆಶೀರ್ವಚನ ನೀಡಿದರು.

ಅಕ್ಷರೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಗುರುವಾಯನಕೆರೆ ಪರಿಸರವೇ ಅಂದ,ಎಕ್ಸೆಲ್ ಹೆಸರೇ ಚಂದ,ಕನ್ನಡ ನಾಡು ನುಡಿಯ ನಿಜವಾದ ಅನಾವರಣ ಎಕ್ಸೆಲ್ ನಲ್ಲಿ ನಡೆದಿದೆ.ಶಿಕ್ಷಣವೆಂಬುದು ನಮ್ಮ ಬದುಕಿನ ದಾರಿ.ಗ್ರಾಮೀಣ ಪ್ರದೇಶದಲ್ಲಿ ಸುಮಂತ್ ಕುಮಾರ್ ಅವರು ಎಕ್ಸೆಲ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ವಿದ್ಯೆ ನೀಡುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ವಹಿಸಿ ಮಾತನಾಡಿದರು.

ವಿಜಯವಾಣಿ ಸ್ಥಾನಿಯ ಸಂಪಾದಕರಾದ ಸುರೇಂದ್ರ ಎಸ್ ವಾಗ್ಲೆ ನೂತನ ಗ್ರಂಥಗಳ ಲೋಕಾರ್ಪಣೆಗೊಳಿಸಿ ಶುಭಾಶಯ ತಿಳಿಸಿದರು.ದ.ಕ ಜಿ.ಕ‌.ಸಾ.ಪ ಅಧ್ಯಕ್ಷರಾದ ಡಾ.ಶ್ರೀನಾಥ್ ಎಮ್ .ಪಿ ಎಕ್ಸೆಲ್ ಅಕ್ಷರ ಗೌರವ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ದ.ಕ ಜಿ.ಕ‌.ಸಾ.ಪ ಅಧ್ಯಕ್ಷರಾದ ಯದುಪತಿ ಗೌಡ,ಗೌರವ ಉಪಸ್ಥಿತರಾಗಿ ಹಿರಿಯರಾದ ಭುಜಬಲಿ ಧರ್ಮಸ್ಥಳ, ಅಳದಂಗಡಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಉಪಸ್ಥಿತರಿದ್ದರು.

ಸಾವಿರಾರು ಕವಿತೆಗಳಲ್ಲಿ ಕೆಲವು ಆಯ್ದ ಕವಿತೆಗಳನ್ನು ಬಿಡುಗಡೆಗೊಳಿಸಲಾಯಿತು. ವಿಜಯ ಆ್ಯಂಟಿನಿ ರಚಿಸಿ,ಹಾಡಿರುವ
ಎಕ್ಸೆಲ್ ಬೆಳಕು ಇದರ ಬಿಡುಗಡೆ ನಡೆಯಿತು.

ಎಕ್ಸೆಲ್ ಗೌರವ -2025 ಪುರಸ್ಕೃತರು

ಸಾಹಿತ್ಯಪ್ರೀತಿ :ಪ.ರಾಮಕೃಷ್ಣ ಶಾಸ್ತ್ರಿ ಹಿರಿಯ ಕವಿಗಳು, ಸಾಹಿತಿಗಳು,ಯಕ್ಷಗಾನ ದಿಗ್ಗಜ : ಪಟ್ಲ ಸತೀಶ್‌ ಶೆಟ್ಟಿ, ಖ್ಯಾತ ಭಾಗವತರು. ಯಕ್ಷ ರಂಗ ಪೋಷಕರು,ಅನ್ನದಾತ ಕೃಷಿಕ :ಅನಿಲ್ ಭಟ್ ಬಳಂಜ, ಬಹು ಬೆಳೆಗಳ ಮಾದರಿ ಕೃಷಿಕರುದೈವಾರಾಧನೆಯ ಹಿರಿಮೆ : ಸುರೇಶ್ ಕುಮಾರ್ ಆರಿಗ, ಪೆರ್ಮಾಣ್ ಗುತ್ತು ಮಾಗಣೆ ದೈವದ ಭಂಡಾರ ಮನೆಯವರು,ಪಾರಂಪರಿಕ ವೈದ್ಯರು : ಕುಶಾಲಪ್ಪ ಗೌಡ ಇಜಿಮಾನ್, ನಾಟಿ ವೈದ್ಯರು. ಗಿಡಮೂಲಿಕ ಚಿಕಿತ್ಸೆ ಕೃತಿಯ ಲೇಖಕರು ಇವರನ್ನು ಗೌರವಿಸಲಾಯಿತು.

ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಅರಮಲೆಬೆಟ್ಟ ಕ್ಯಾಂಪಸ್ ಪ್ರಾಂಶುಪಾಲರಾದ ಡಾ.ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕರಾದ ಪ್ರಜ್ವಿತ್ ರೈ ಮತ್ತು ಈಶ್ವರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.ಪ್ರಾಧ್ಯಾಪಕರು, ಸಿಬ್ಬಂದಿಗಳು ಸಹಕರಿಸಿದರು.

Related posts

ಲಾಯಿಲ ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ; ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಆಯ್ಕೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆ: ಮೇ 19: ಗೋಗ್ರಾಸ ಹೊರ ಕಾಣಿಕೆ ಸಮರ್ಪಣೆ: ಮೇ 26: ನಂದಗೋಕುಲ ದೀಪೋತ್ಸವ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಕೆಎಂಎಫ್ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ

Suddi Udaya

ಬಜಿರೆ: ಚಿರತೆ ಓಡಾಟ-ಜನರಲ್ಲಿ ಆತಂಕ

Suddi Udaya
error: Content is protected !!