ವೇಣೂರು: 2025 -26 ನೇ ಸಾಲಿನಲ್ಲಿ ಸಹಕಾರ ಚಳುವಳಿಯ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಸಹಕಾರಿ ಯೂನಿಯನ್ ಲಿಮಿಟೆಡ್ ನೇತೃತ್ವದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ
ವಿಭಾಗ) ವೇಣೂರು ಇಲ್ಲಿಯ ವಿದ್ಯಾರ್ಥಿಗಳಾದ 10ನೇ ತರಗತಿಯ ಅನ್ವಿತಾ ಎ ಹಾಗೂ ಶ್ರೀನಿಕ ಪ್ರಥಮ ಮತ್ತು ದ್ವಿತೀಯ ಎರಡೂ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.











