September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

ಉಜಿರೆ: ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳನ್ನು ಕಂಠ ಪಾಠ ಮಾಡಿ ಎಳೆಯ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರ ಮನೆಗೆ ಹಿಂದೂ ಮುಖಂಡ ಡಿ.ಕಿರಣ್ ಚಂದ್ರ ಪುಷ್ಪಗಿರಿ ರವರು ನ.27ರಂದು ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಮೋದ್ ಡಿಡುಪೆ, ಸತೀಶ್ ಕನ್ಯಾಡಿ, ಗಣೇಶ್ ಬೊಳಿಯೊಂಜಿ, ಕು.ಅದ್ವಿತಿ ರಾವ್ ರವರ ತಾಯಿ ಅಖಿಲಾ, ಸಹೋದರಿ ಉಪಸ್ಥಿತರಿದ್ದರು.

ಇವರು ಶೃಂಗೇರಿ ಜಗದ್ಗುರುಗಳ ಸನ್ನಿಧಿಯಲ್ಲಿ ನಡೆದ ಭಗವದ್ಗೀತೆ 18 ಅಧ್ಯಾಯದ 700 ಶ್ಲೋಕಗಳ ಕಂಠಪಾಠ ಪರೀಕ್ಷೆ (ಗೀತಾ ಜ್ಞಾನ ಯಜ್ಜ)ಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದಿರುತ್ತಾರೆ. ಇವರ ಭಗವದ್ಗೀತೆಯ 18 ಅಧ್ಯಾಯದ ಪಠಣವು ಖಾಸಗಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರತಿ ಸೋಮವಾರ ನೇರ ಪ್ರಸಾರಗೊಂಡಿತ್ತು. ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಭಗವದ್ಗೀತಾ ಕಂಠಪಾಠ ಪಠಣ (ಎರಡು ಅಧ್ಯಾಯ)ವನ್ನು ಮಾಡಿರುತ್ತಾರೆ. ಪ್ರಸ್ತುತ ಇವರು ಯಕ್ಷಭಾರತಿ ಕನ್ಯಾಡಿ ಸಂಸ್ಕಾರ ಶಿಕ್ಷಣದ ವಿದ್ಯಾರ್ಥಿನಿಯಾಗಿದ್ದು, ಇದಲ್ಲದೆ ವಿಧುಷಿ ಪ್ರಿಯ ಸತೀಶ್ ರವರಲ್ಲಿ ಭರತನಾಟ್ಯ ಅಭ್ಯಾಸ, ವಿಧುಷಿ ಶ್ಯಾಮಲ ನಾಗರಾಜ್ ರವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದಾರೆ.

Related posts

ನಡ – ಕನ್ಯಾಡಿ ಶಕ್ತಿ ಕೇಂದ್ರ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವತಿಯಿಂದ ಸವಣಾಲು ಅ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ರೂ.1.25 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ನಾವೂರು: ಗೋಳಿದಡಿ ನಿವಾಸಿ ಲೀಲಾವತಿ ನಿಧನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!