September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ‘ಲಕ್ಷ್ಯ ಡೇ ಕೇರ್ ಸೆಂಟರ್’ ಹಾಗೂ ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರಿಂದ ಶ್ಲಾಘನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಮ್ಮ ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ಮಕ್ಕಳ ಹಿತಾಸಕ್ತಿಗಾಗಿ ತೆರೆದುಕೊಳ್ಳುತ್ತಿರುವ ಲಕ್ಷ್ಯ ಸಂಸ್ಥೆಗಳಿಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಯೋಗರಾಜ್ ಭಟ್ ಇವರು ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಬೊಳ್ವಾರು ಬೈಪಾಸ್ ರಸ್ತೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗಾರ್ಡನ್ಸ್ ಹೋಟೆಲ್ ಮುಂಭಾಗದಲ್ಲಿರುವ ರವಿಂದ್ರ ಕಾಂಪ್ಲೆಕ್ಸ್ ನಲ್ಲಿರುವ ಲಕ್ಷ್ಯ ಡೇ ಕೇರ್ ಸಂಸ್ಥೆಯು ಇದೇ ಜನವರಿಯಲ್ಲಿ ಅನಾವರಣಗೊಳ್ಳುತ್ತಿದ್ದು, ಒಂದು ವರ್ಷದಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಶಿಶು ಶಿಕ್ಷಣ ತಜ್ಞರಿಂದ ಹಾಗೂ ಮನಃಶಾಸ್ತ್ರಜ್ಞರಿಂದಲೇ ನಡೆಸಲ್ಪಡುತ್ತಿದ್ದು ಪ್ರತಿ ಶಿಶುವಿನ ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನವಿರಿಸಿ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡುತ್ತಿದೆ. ಇದು ಉದ್ಯೋಗಕ್ಕಾಗಿ ತೆರಳುವ ಪಾಲಕರಿಗೆ ಬಹು ಅನುಕೂಲಕರವಾಗಿದ್ದು ಸಂಶೋಧಿತ ಶೈಕ್ಷಣಿಕ ಚಟುವಟಿಕೆ ಆಟಗಳನ್ನು ಹೊಂದಿರುತ್ತದೆ. ಪ್ರತಿ ಶಿಶುವಿಗೂ ಹಾಗೂ ಪಾಲಕರಿಗೂ ವೈದ್ಯರ ಸಲಹೆ ಆಧಾರಿತ ಆಪ್ತಸಲಹೆ ಮತ್ತು ಮಾರ್ಗದರ್ಶನದ ಲಭ್ಯವಿರುತ್ತದೆ. ಈಗಾಗಲೇ ದಾಖಲಾತಿ ಆರಂಭವಾಗಿದ್ದು ತಾಲೂಕಿನ ಪಾಲಕರಿಗೆ ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆ ವಿನಂತಿಸಿಕೊಂಡಿರುತ್ತದೆ.

ಇದರೊಂದಿಗೆ ಸಂಪೂರ್ಣ ಜೀವನಾಧಾರಿತ ಕೌನ್ಸೆಲಿಂಗ್ ಸೌಲಭ್ಯವನ್ನು ಲಕ್ಷ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಅಡೆತಡೆಗಳನ್ನು ನಿವಾರಿಸಲು ಎಜುಕೇಷನಲ್ ಕೌನ್ಸೆಲಿಂಗ್ ಸೌಲಭ್ಯ ಇರುವುದು. ಇದರಿಂದ ಮಕ್ಕಳಲ್ಲಿ ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾರ್ಗದರ್ಶನ ಪಡೆಯಲು ಸಾಧ್ಯವಿದೆ. ಜೊತೆಗೆ ಗರ್ಭಿಣಿಯರಿಗೆ, ಶಿಶುಗಳಿಗೆ, ಶಿಶು ಆರೈಕೆಗೆ, ಹದಿಹರೆಯದ ಯುವ ಮನಸ್ಸುಗಳಿಗೆ ಹಾಗೂ ವಯಸ್ಕರಿಗೆ ವಿಶೇಷ ಕೌನ್ಸೆಲಿಂಗ್ ಸೌಲಭ್ಯ ಇರುತ್ತದೆ. ಈ ಸಂಸ್ಥೆಯು ಪುತ್ತೂರಿನ ದುರ್ಗಾಪರಮೇಶ್ವರ ಭಟ್ ಹಾಗೂ ಶ್ರೀಮತಿ ಅರ್ಪಿತಾ ಭಟ್ ಇವರ ನೇತೃತ್ವದಲ್ಲಿ ನಡೆಯುತ್ತಿದೆ.

Related posts

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

Suddi Udaya

ಹರಿದ್ವಾರ-ರಿಷಿಕೇಶ್ ಯಾತ್ರೆಯಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Suddi Udaya

ನಾರಾವಿಯ ಶರತ್ ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆ

Suddi Udaya

ಜು.11: ಉಜಿರೆಯಲ್ಲಿ ಹೆಗ್ಡೆ ಮೆಡಿಕಲ್ಸ್ ಶುಭಾರಂಭ

Suddi Udaya

ಕಳೆಂಜ ಅರಣ್ಯ ಇಲಾಖೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ: ಅಕ್ರಮ ಪ್ರವೇಶ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ: 11 ಜನರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಾಲ್ಕೂರು: ಬೊಳ್ಳಾಜೆ ನಿವಾಸಿ ಸೀತು ನಿಧನ

Suddi Udaya
error: Content is protected !!