25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಕನ್ಯಾಡಿ ಸೇವಾಭಾರತಿಯ ನೂತನ ಕಾರ್ಯಾಲಯದ ವಾಸ್ತುಪೂಜೆ ಹಾಗೂ ಪ್ರವೇಶ:

ಕನ್ಯಾಡಿ: ಸೇವಾಭಾರತಿ ಕಾರ್ಯಾಲಯದ ಸೇವಾನಿಕೇತನ ಹೊಸ ಕಟ್ಟಡದ ವಾಸ್ತುಪೂಜೆಯು ನವೆಂಬರ್ 27 ರಂದು ಭಕ್ತಿಭಾವದಿಂದ ನೆರವೇರಿತು. ಅದರ ಮುಂದುವರೆದ ಕಾರ್ಯಕ್ರಮವಾಗಿ ನವೆಂಬರ್ 28 ರಂದು ನವೀನ ಕಟ್ಟಡದಲ್ಲಿ ಕಾರ್ಯಾಲಯ ಪ್ರವೇಶ ಹಾಗೂ ಆಶ್ಲೇಷ ಬಲಿ ಪ್ರಧಾನವಾಗಿ ನಡೆಯಿತು. ಸಾಯಂಕಾಲ 6.00 ಗಂಟೆಗೆ ದುರ್ಗಾಪೂಜೆ ಜರುಗಿತು

ಈ ವಿಶೇಷ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್, ಅನೇಕ ಗಣ್ಯರು, ಸಮಾಜಸೇವಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಭಜನೆಯ ಮೂಲಕ ದೇವರ ಸ್ತುತಿ ಕಾರ್ಯಕ್ರಮಕ್ಕೆ ಭಕ್ತಿಪರ ವಾತಾವರಣದ ಸೊಬಗು ಹೆಚ್ಚಿಸಿತು.

ಹೊಸ ಕಟ್ಟಡದ ಆರಂಭದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಪುನಶ್ಚೇತನವನ್ನು ಪಡೆದುಕೊಂಡು ಸ್ವಾವಲಂಬನೆಯತ್ತ ಸಾಗುವಂತೆ ಹಾಗೂ ಸೇವಾಭಾರತಿಯ ವಿವಿಧ ಸೇವಾಚಟುವಟಿಕೆಗಳು ಈ ಹೊಸ ಕಟ್ಟಡದ ಮೂಲಕ ಮತ್ತಷ್ಟು ಸಕ್ರಿಯವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

Related posts

ವೀಲ್ ಚಯರ್ ನಲ್ಲಿ ಬಂದು 88 ವರ್ಷದ ಅಜ್ಜಿ ಗಂಗಮ್ಮ ಹೆಗ್ಡೆಯವರಿಂದ ಮತದಾನ

Suddi Udaya

ಪಡಂಗಡಿ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ

Suddi Udaya

ಉಜಿರೆಯಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ:

Suddi Udaya

ಮದ್ದಡ್ಕದಿಂದ ಪಲ್ಕೆ ಬಲ್ಕತ್ಯಾರು ಸಮೀಪ ಟ್ರಾನ್ಸ್‌ಫಾರ್ಮರಿಗೆ ಸುತ್ತುವರಿದ ಬಳ್ಳಿ, ಗಿಡ ಗಂಟಿಗಳು: ತೆರವಿಗೆ ಮೆಸ್ಕಾಂ ಇಲಾಖೆಗೆ ಗ್ರಾಮಸ್ಥರ ಒತ್ತಾಯ

Suddi Udaya

ಮಾ.3: ಬೆಳ್ತಂಗಡಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

Suddi Udaya

ಕೊಕ್ಕಡ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ

Suddi Udaya
error: Content is protected !!