September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಂಕಕಾರಂದೂರು ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಬೀಳ್ಕೊಡುಗೆ

ತೆಂಕಕಾರಂದೂರು ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೊಂದಿಗೆ ಪ್ರಾರಂಭಿಸಿ ಮಕ್ಕಳು ಹಾಗೂ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಸಭಾಧ್ಯಕ್ಷತೆಯನ್ನು ಸುರೇಶ್ ಶೆಟ್ಟಿ ಕುರೆಲ್ಯ ವಹಿಸಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಅಂಗನವಾಡಿ ಕೇಂದ್ರದಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಗನವಾಡಿ ಸಹಾಯಕಿ ಇವರಿಗೆ ಬಿಳ್ಕೊಡುವ ಕಾರ್ಯಕ್ರಮ ನಡೆಯಿತು. ಪೋಷಕರು ಬಾಲ ವಿಕಾಸ ಸಮಿತಿ ಸಲಹಾ ಸಮಿತಿ ಊರವರು ಶ್ರೀ ಶಕ್ತಿ ಸ್ವ ಸಹಾಯ ಸಂಜೀವಿನಿ ಸಂಘಗಳು, ಹಳೆ ವಿದ್ಯಾರ್ಥಿಗಳು ಸೇರಿ ಸುಮಾರು 25,000 ಮೌಲ್ಯ ವೆಚ್ಚದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು. ಸುನಂದ ರವರ ಹೆತ್ತವರು ಕೂಡ ಉಡುಗೊರೆ ನೀಡಿ ಸಹಕರಿಸಿದರು. ಇದೇ ವೇಳೆ ಆಶಾ ಕಾರ್ಯ ಕರ್ತೆ ಬಾಲ ವಿಕಾಸ ಸಮಿತಿ ಸದಸ್ಯೆ ನಿವೃತ್ತರಾಗಿರುವ ಗುಲಾಬಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಪಿ.ಡಬ್ಲ್ಯೂ.ಡಿ ಇಂಜಿನಿಯರ್ ಸೂರಜ್ ಹಾನಿಂಜ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಹೇಮಂತ್, ಶ್ರೀಮತಿ ಪದ್ಮಾವತಿ ಗಣ್ಯರಾದ, ಗಣ್ಯರಾದ ರಾಮಚಂದ್ರರಾವ್ ಅಮನಬೈಲು, ಮಹಿಳಾ ಪೊಲೀಸ್ ಸಿಬ್ಬಂದಿ ಜಯಶ್ರೀ ಸಲಹಾ ಸಮಿತಿ ಗೌರವಾಧ್ಯಕ್ಷ ಚಂದ್ರ ಪೂಜಾರಿ ಹಾಗು ಸದಸ್ಯರುರುಗಳಾದ ವಿಶ್ವನಾಥ ಲಿಂಗಾಯಿತ, ಎಂ ಸಿ ನಾರಾಯಣ ಗೌಡ, ಜಗದೀಶ್ ಪಿಎನ್, ಹರಿಪ್ರಸಾದ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ದಕ್ಷಿಣ ಕನ್ನಡ ಜಿಲ್ಲೆ,, ಇಂದಿರಾ ವಿಶ್ವನಾಥ್ ಮೂಲ್ಯ,, ಶಿವಪ್ರಸಾದ್ ಕಜ್ಜೆಲು, ಕೊರಗಪ್ಪ ನಾಯ್ಕ ಗಿಳಿಕಾಪು, ಅಂಗನವಾಡಿ ಕಾರ್ಯಕರ್ತೆ ವಸುಂದರಾ ಮರಾಠೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಸಹ ಸಮಿತಿಯ ಅಧ್ಯಕ್ಷ ಶಿವಪ್ರಸಾದ್, ಅಂಗನವಾಡಿ ಕಾರ್ಯಕರ್ತೆ ಸ್ಪೂರ್ತಿ, ಚೆನ್ನಪ್ಪ ಶೆಟ್ಟಿ ತಾರೆದೊಟ್ಟು, ಅಬ್ದುಲ್ ಖಾದರ್, ಚಂದ್ರಾವತಿ, ಸಂಪ, ಸುಜಾತ, ಊರವರು ಮಕ್ಕಳ ಪೋಷಕರು ಶ್ರೀ ಶಕ್ತಿ ಸ್ವಸಾಯ ಸಂಜೀವಿನಿ ತಂಡದ ಅಧ್ಯಕ್ಷರು,ಕಾರ್ಯದರ್ಶಿಗಳು, ಸದಸ್ಯರುಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಾಲ ವಿಕಾಸ ಬಾಲ ವಿಕಾಸ ಸಮಿತಿಯ ಸಮಿತಿಯ ಅಧ್ಯಕ್ಷೆ ಶೃತಿ ಕಾರ್ಯಕ್ರಮವನ್ನು ನಿರೂಪಿಸಿದರು ಅಂಗನವಾಡಿ ಕಾರ್ಯಕರ್ತೆ ಮನಿತಾ.ಸಿ.ಶೆಟ್ಟಿ ಸ್ವಾಗತಿಸಿ ವಂದಿಸಿದರು, ಅನುಷಾ, ಭವ್ಯ, ಜಯಶ್ರೀ, ಅರುಣ ಎಸ್. ಮೆಹಂದಾ ಮೆಹಂದಳೆ ಸಹಕರಿಸಿದರು.

Related posts

ನಿಡ್ಲೆ : ಬೂಡುಜಾಲು ನಿವಾಸಿ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ: ಚಾಮುಂಡಿನಗರ ಸ.ಕಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಉಜಿರೆಯಲ್ಲಿ ಜಿ-ಮಾಲ್ ಉದ್ಘಾಟನೆ: ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ: ಶರತ್‌ಕೃಷ್ಣ ಪಡ್ವೆಟ್ನಾಯ

Suddi Udaya

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya
error: Content is protected !!