23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿರಿ ಕೇಂದ್ರ ಕಛೇರಿಗೆ ಭೇಟಿ

ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ರಾಯಭಾರಿಯೂ ಆಗಿರುವ ರಮೇಶ್ ಅರವಿಂದ್ ರವರು ನ.29 ರಂದು ಬೆಳ್ತಂಗಡಿಯ ಸಿರಿ ಕಛೇರಿಗೆ ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ರಮೇಶ್ ಅರವಿಂದ್ ರವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗೌರವಾರ್ಪಣೆ ಸಲ್ಲಿಸಿದರು.

ಸಿರಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದರವರು ನಾವು ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೂ ಇಷ್ಟವಾದ ವ್ಯಕ್ತಿಗಳ ಜೊತೆ ಇಷ್ಟಪಟ್ಟು, ಮನಸಿಟ್ಟು ಮಾಡಬೇಕು. ಹಾಗಿದ್ದಲ್ಲಿ ಮಾತ್ರ ಎಲ್ಲಾ ಕೆಲಸದಲ್ಲೂ ಒಂದು ಅದ್ಬುತವಾದ ಯಶಸ್ಸನ್ನು ಕಾಣಲು ಸಾಧ್ಯ. ಅದೇ ರೀತಿ ಹೆಗ್ಗಡೆಯವರು ಒಂದೇ ಸೂರಿನಡಿ ಸಿರಿಯ ಎಲ್ಲಾ ಉತ್ಪಾದನಾ ಘಟಕಗಳನ್ನೂ ಸ್ಥಾಪಿಸಿ,ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಮೆಷಿನರಿಗಳನ್ನು ಅಳವಡಿಸಿ ಸಿರಿಯ ಎಲ್ಲಾ ಸಿಬ್ಬಂದಿಗಳಿಗೂ ಕೆಲಸಕಾರ್ಯಗಳನ್ನು ನಿರ್ವಹಿಸಲು ಒಂದು ವಿಶ್ವಮಟ್ಟದ ಮೂಲಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆಸರೆ ಆಶೀರ್ವಾದ ಸಹಕಾರ ನಮಗೆ ಇರಬೇಕಾದ್ರೆ, ನಾವು ಮಾಡೋ ಪ್ರತಿಯೊಂದು ಕೆಲಸದಲ್ಲೂ ಪ್ರೀತಿ ಶ್ರದ್ಧೆಯನ್ನಿಟ್ಟು ಮಾಡಬೇಕು. ಆಗ ಮಾತ್ರ ಕರ್ನಾಟಕ ರಾಜ್ಯದಲ್ಲಿ ಮನೆಮಾತಾಗಿರುವ ನಮ್ಮ ಸಿರಿ ಬ್ರಾಂಡ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿರುತ್ತದೆ. ಹಾಗಾಗಿ ಇಂತಹ ಒಂದು ಅದ್ಬುತವಾದ ಕನಸನ್ನು ಹೊಂದಿರುವ ಪೂಜ್ಯ ದಂಪತಿಗಳ ಕನಸನ್ನು ನಾವೆಲ್ಲರೂ ಜೊತೆ ಸೇರಿ ಇಷ್ಟಪಟ್ಟು ದುಡಿಯುವ ಮೂಲಕ ನನಸು ಮಾಡೋಣ, ಸಿರಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಸಿರಿ ಸಿಬ್ಬಂದಿಗಳಿಗೆ ಸ್ಪೂರ್ತಿ ತುಂಬಿದರು.

ಸಿರಿ ಸಂಸ್ಥೆಯ ಉಪ್ಪಿನಕಾಯಿ ಘಟಕ , ಶುಚಿಕಾರಕ ಉತ್ಪನ್ನಗಳ ಘಟಕ, ಶೇಂಗಾ ಚಿಕ್ಕಿ ಉತ್ಪಾದನಾ ಘಟಕ, ಸಿರಿ ಪುಷ್ಠಿ , ಮಸಾಲಾ ಉತ್ಪನಗಳು, ಸೇವರೀಸ್ ಉತ್ಪನ್ನಗಳ ಘಟಕ ಹಾಗೂ ಸಿದ್ಧ ಉಡುಪು ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದ ಶ್ರೀ ರಮೇಶ್ ರವರು ಸಿರಿಯಲ್ಲಿ ನಡೆಯುತ್ತಿರುವ ಉತ್ಪಾದನಾ ಕಾರ್ಯಚಟುವಟಿಕೆಗಳನ್ನು, ಇಲ್ಲಿ ಉತ್ಪಾದಿಸಲಾಗುತ್ತಿರುವ ಉತ್ತಮ ಗುಣಮಟ್ಟದ ವಿವಿಧ ಬಗೆಯ ಸಿರಿ ಉತ್ಪನ್ನಗಳನ್ನು ವೀಕ್ಷಿಸಿ, ಸಿರಿ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ನಾನು ಸಿರಿ ರಾಯಭಾರಿ ಮಾತ್ರ ಅಲ್ಲ, ನಾನು ಸ್ವತಃ ಸಿರಿ ಉತ್ಪನ್ನಗಳನ್ನು ಖರೀದಿಸಿ ಪ್ರತಿನಿತ್ಯ ನನ್ನ ಮನೆಯಲ್ಲಿ ಬಳಸುತ್ತಿದ್ದೇನೆ. ಅದರಲ್ಲೂ ಸಿರಿಯ ಅಡಿಕ್ಟೆಡ್ ಶರ್ಟುಗಳ ಗುಣಮಟ್ಟವಂತೂ ಅತ್ಯುತ್ತಮವಾಗಿದ್ದು, ನಾನು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿಯು ಕೂಡ ನನ್ನ ಸ್ನೇಹಿತರಿಗೆ, ಅಭಿಮಾನಿಗಳಿಗೆ ಸಿರಿ ಅಡಿಕ್ಟೆಡ್ ಶರ್ಟುಗಳನ್ನು ನೀಡುವ ಮೂಲಕ ಅವರುಗಳಿಗೂ ಸಿರಿ ಶರ್ಟುಗಳ ಬಗ್ಗೆ ಪ್ರಚಾರ ಪಡಿಸಿ ಎಲ್ಲರಿಗೂ ನಮ್ಮ ಸಿರಿಯ ಉತ್ಪನ್ನಗಳನ್ನು ಉಪಯೋಗಿಸಲು ಪ್ರೇರೇಪಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಜೇಶ್ ಪೈ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ಸಿರಿಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ರಮೇಶ್ ಅರವಿಂದ್ ರವನ್ನು ಅಭಿನಂದಿಸಿ, ಸಂಭ್ರಮಿಸಿದರು.

ಸಿರಿ ಗೋದಾಮು ವಿಭಾಗದ ಜನರಲ್ ಮ್ಯಾನೇಜರ್ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಕರ್ನಾಟಕ ದಲಿತ ಚಳುವಳಿ ಸಂಭ್ರಮಾಚರಣಾ ಸಮಿತಿ ಬೆಳ್ತಂಗಡಿ; ಡಿ. 16 : ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ: ವಿಚಾರ ಸಂಕಿರಣ, ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಜಿನಾಭಜನಾ ಸ್ಪರ್ಧೆಗೆ ಆಯ್ಕೆ

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya

ಎಕ್ಸೆಲ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ

Suddi Udaya

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

Suddi Udaya

ಗುರುವಾಯನಕೆರೆ: ವಿದ್ಯಾರ್ಥಿಯ ಅಗತ್ಯ ದಾಖಲೆ ಪತ್ರವಿದ್ದ ಬ್ಯಾಗ್ ಕಳೆದು ಹೋಗಿದ್ದು ಸಿಕ್ಕಿದವರು ಸಹಕರಿಸುವಂತೆ ಮನವಿ

Suddi Udaya
error: Content is protected !!