September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಿತ್ತಬಾಗಿಲು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಆರ್ಥಿಕ ಸಹಾಯ

ಮಿತ್ತಬಾಗಿಲು : ಇಲ್ಲಿಯ ದಿಡುಪೆಯ ರಮೇಶ್ ಗೌಡ ಅಡ್ಕ ವಿದ್ಯಾನಗರ ಇವರ ಮನೆಗೆ ನ.30 ರಂದು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿ ಮತ್ತು ಆರ್ಥಿಕ ಸಹಾಯ ನೀಡಲಾಯಿತು.

ಇವರು ಕಟ್ಟಡ ಕೂಲಿ ಕಾರ್ಮಿಕರಾಗಿದ್ದು, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಸಕ್ರಿಯ ಜವಾಬ್ದಾರಿಯುತರಾಗಿ ನ.7 ರಂದು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಬಲಗಾಲಿನ ಮೊಣಗಂಟಿಗೆ ತೀವ್ರ ವಾದ ಪೆಟ್ಟು ಬಿದ್ದಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾರೆ. ಆದ್ದರಿಂದ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಭೇಟಿ ನೀಡಿ ಆರೋಗ್ಯ ಬಗ್ಗೆ ವಿಚಾರಿಸಿ ಆರ್ಥಿಕ ಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಕರಿಯ ಗೌಡ ಹಾಗೂ ದಿಲೀಪ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಎಮ್.ಸಿ ಹಾಸ್ಪಿಟಲ್ ಮಂಗಳೂರು, ಶ್ರೀ ವಿದ್ಯಾಗಣಪತಿ ಅಧ್ಯಕ್ಷ ತೀಕ್ಷಿತ್ ಕೆ ಕಲ್ಬೆಟ್ಟು, ಉಪಾಧ್ಯಕ್ಷ ಯೋಗೀಶ್ ಗೌಡ ದರ್ಖಸ್, ಹರೀಶ್ ಗೌಡ, ಪದ್ಮನಾಭ ಗೌಡ ಕೆಮ್ಮಟೆ, ಶಿವರಾಮ ಗೌಡ , ಜನಾರ್ಧನ ಗೌಡ ವಿದ್ಯಾನಗರ, ಕಮಲಾಕ್ಷ ಗೌಡ ಕೊಟ್ರಡ್ಕ ಮತ್ತು ಗ್ರಾಮಸ್ಥರು ಉಪಸ್ಥಿರಿದ್ದರು.

Related posts

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya

ಕಳೆಂಜ: ಅತಂತ್ರರಾದ ರಾಮಣ್ಣ ನಿಂತಿಕಲ್ಲು ಇವರಿಗೆ ತಾತ್ಕಾಲಿಕ ಮನೆ ನಿರ್ಮಾಣ

Suddi Udaya

ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ: ಹೃದಯ ಶ್ರೀಮಂತಿಕೆಯ ವ್ಯಕ್ತಿ ದಿನಕರ ಪೂಜಾರಿಯವರು: ಸಂತೋಷ್ ಕುಮಾರ್ ಕಾಪಿನಡ್ಕ

Suddi Udaya

ಉಜಿರೆ-ಪೆರಿಯಶಾಂತಿ ಹೆದ್ದಾರಿ ಅಭಿವೃದ್ಧಿ ಖಾಸಗಿ ಜಾಗದ ಮರಗಳ ಸಮೀಕ್ಷೆ

Suddi Udaya

ಶಾಂತಿಶ್ರೀ ‘ ಜೈನ ಮಹಿಳಾ ಸಮಾಜದ ವತಿಯಿಂದ, ‘ ಶೈಕ್ಷಣಿಕ ಕಾರ್ಯಕ್ರಮ ‘

Suddi Udaya

ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರಿಗೆ ಹೆಗ್ಗಡೆಯವರಿಂದ ಅಭಿನಂದನೆ

Suddi Udaya
error: Content is protected !!