23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗ್ರಾಮ ಪಂಚಾಯತಿ ಕಲಿಕಾ ಕೇಂದ್ರಗಳ ಯಶೋಗಾಥೆಗಳ ದಾಖಲೀಕರಣ ಕುರಿತು ತರಬೇತಿ: ಉಜಿರೆ – ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಭಾಗಿ

ಬೆಳ್ತಂಗಡಿ: ಗ್ರಾಮ ಪಂಚಾಯತಿ ಕಲಿಕಾ ಕೇಂದ್ರಗಳ ಯಶೋಗಾಥೆಗಳ ದಾಖಲೀಕರಣ ತರಬೇತಿಯು ಡಿ.2-3ರಂದು ಜರುಗಿದ್ದು ಬೆಳ್ತಂಗಡಿ ತಾಲೂಕಿನಿಂದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ಮಡಂತ್ಯಾರು ಪಂಚಾಯತ್ ನ ಅಧ್ಯಕ್ಷೆ ರೂಪ ಎಸ್, ಪಿಡಿಓ ಶ್ರೀನಿವಾಸ್ ರವರು ಭಾಗವಹಿಸುತ್ತಾರೆ.

ಭಾರತ ಸರ್ಕಾರದ ಪಂಚಾಯತ್ ರಾಜ್ ಸೂಚನೆಯಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 173 ಗ್ರಾಮ ಪಂಚಾಯಿತಿಗಳನ್ನು ‘ಪಂಚಾಯಿತಿ ಕಲಿಕಾ ಕೇಂದ್ರ” (Panchayat Learning Centre – PLC) ಗಳನ್ನು ಗುರುತಿಸಿದ್ದು, ಈ ಪಂಚಾಯಿತಿ ಕಲಿಕಾ ಕೇಂದ್ರಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಉತ್ತಮ ಕಾರ್ಯಕ್ಷಮತೆ ಕಲಿಕೆಯ ಅವಕಾಶ ಕಲ್ಪಿಸುವುದು ಇಲ್ಲಿನ ಪ್ರಮುಖ ಆಶಯವಾಗಿದೆ. ಈಗಾಗಲೇ ತಮ್ಮ ಜಿಲ್ಲೆಯಲ್ಲಿ ತಮ್ಮ ಶಿಫಾರಸ್ಸಿನಂತೆ ಈಗಾಗಲೇ ಉತ್ತಮ ಕೆಲಸ ನಿರ್ವಹಣೆ ಮಾಡಿರುವ, ಪಂಚಾಯತ್ ರಾಜ್ ಆಶಯಕ್ಕೆ ಅನುಗುಣವಾಗಿ ವಿನೂತನ ಚಟುವಟಿಕೆಗಳನ್ನು ಕೈಗೊಂಡಿರುವ ಗ್ರಾಮ ಪಂಚಾಯಿತಿಗಳನ್ನು ಪಂಚಾಯಿತಿ ಕಲಿಕಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಪಂಚಾಯಿತಿ ಕಲಿಕಾ ಕೇಂದ್ರಗಳಲ್ಲಿ ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಈ ಪಂಚಾಯಿತಿ ಕಲಿಕಾ ಕೇಂದ್ರಗಳಲ್ಲಿ ಆಗಿರುವ ವಿನೂತನ ವಿಶಿಷ್ಟ ಕಾರ್ಯಚಟುವಟಿಕೆಗಳ ಯಶೋಗಾಥೆಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಪಂಚಾಯಿತಿ ಕಲಿಕಾ ಕೇಂದ್ರಗಳನ್ನು ಕುರಿತು ವಿಷಯ ಪರಿಚಯ ಮಾಡುವುದು ಮತ್ತು ಯಶೋಗಾಥೆಗಳು ದಾಖಲೀಕರಣ ಮಾಡುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

Related posts

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ, ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಬೈಕ್ ಅಪಘಾತದಲ್ಲಿ ಮೃತ್ಯು

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಕರಾವಳಿ ಹಿಂದುತ್ವದ ಭದ್ರಕೋಟೆ : ಶಾಸಕ ಹರೀಶ್ ಪೂಂಜ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸಂಸ್ಕೃತ ಸಂಘದ ಪದ ಪ್ರದಾನ

Suddi Udaya

ಉಜಿರೆ: ಬದನಾಜೆಯಲ್ಲಿ ಬೈಕ್ ಢಿಕ್ಕಿ: ಮೂರನೇ ತರಗತಿಯ ವಿದ್ಯಾರ್ಥಿನಿ ಸಾವು

Suddi Udaya
error: Content is protected !!