September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಬೆಳ್ತಂಗಡಿ : ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಕಾಲೇಜು ವಾರ್ಷಿಕೋತ್ಸವವು ಡಿ.1 ರಂದು ಕಾಲೇಜು ಆವರಣದಲ್ಲಿ ನೆರವೇರಿತು.

ಶಾಸಕ ಹರೀಶ್ ಪೂಂಜ ರವರು ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸುಕುಮಾರ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಾನಂದ ಗೌಡ, ಬಂಟ್ವಾಳ ಆರ್ ಟಿ ಓ ಚರಣ್ ಕೆ. ಎ, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ , ಖ್ಯಾತ ನ್ಯಾಯವಾದಿ ಬಿ.ಕೆ ಧನಂಜಯ್ ರಾವ್ ಬೆಳ್ತಂಗಡಿ, ಬೆಳ್ತಂಗಡಿ ಟಿವಿಎಸ್ ಮೋಟಾರ್ಸ್ ಮಾಲಕ ರೋನಾಲ್ಡ್ ಲೋಬೊ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಸೂರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಪೂರ್ಣಿಮಾ , ನಿವೃತ್ತ ಕಂದಾಯ ನಿರೀಕ್ಷಕ ಪದ್ಮ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ವಾಮನ ಆಚಾರ್ಯ, ವಿದ್ಯಾರ್ಥಿ ನಾಯಕರುಗಳಾದ ಕುಮಾರ್ , ವೈಭವ ಆಚಾರ್ಯ, ಪ್ರಕೃತಿ, ಸಂಜನಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶೀನಾ ನಾಡೋಳಿ ನಿರ್ದೇಶನದ ವೈದೇಹಿ ವಿರಚಿತ (ಮೂಲ ಶೇಕ್ಸ್ ಪಿಯರ್) ನಾಟಕ ಧಾಂ ಧೂಮ್ ಸುಂಟರಗಾಳಿ ಎಂಬ ನಾಟಕವು ಕಾಲೇಜು ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಉಪನ್ಯಾಸಕ ಆನಂದ ಡಿ. ಸ್ವಾಗತಿಸಿದರು. ಕನ್ನಡ ಅಧ್ಯಾಪಕರು ಶ್ರೀಮತಿ ಪೂರ್ಣಿಮಾ ಕೆ ಕೆ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕ ಡಾ ಗಣೇಶ ರಾಮಚಂದ್ರ ಭಟ್ ಹಾಗೂ ಅಧ್ಯಾಪಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಗುಡ್ಡ ಕುಸಿತ

Suddi Udaya

ನಾರಾವಿ ಸಂತ ಅಂತೋನಿ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಕಲ್ಯಾಣ ಮಂದಿರ ಆರಾಧನೆ

Suddi Udaya

ಅರುವ ‘ನಮ ಮಾತೆರ್ಲ ಒಂಜೇ’ ಕಲಾತಂಡದಿಂದ ಆರ್ಥಿಕ ಸಹಾಯಧನ

Suddi Udaya

ಮಡಂತ್ಯಾರು ಜೆಸಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷರಾಗಿ ಜೆಸಿ ಅಮಿತಾ ಅಶೋಕ್ ಅಧಿಕಾರ ಸ್ವೀಕಾರ

Suddi Udaya

12 ವರ್ಷಗಳ ಮೋದಿ ನೇತೃತ್ವ – ಹೊಸ ಭಾರತದ ಆತ್ಮವಿಶ್ವಾಸದ ಪಯಣ: ಅನಿಲ್ ಕುಮಾರ್ ಯು

Suddi Udaya
error: Content is protected !!