September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾ ಬಹು ನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ಪುತ್ತೂರಿನ ಬೆಡಗಿ ರಚನಾ ರೈ ನಾಯಕಿಯಾಗಿ ಅಭಿನಯ

ಬೆಳ್ತಂಗಡಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾ ದಿ ಡೆವಿಲ್ ನಲ್ಲಿ ಪುತ್ತೂರಿನ ಬೆಡಗಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.

ಡೆವಿಲ್’ ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.

ನಟಿ ರಚನಾ ರೈ ಅವರು ‘ದಿ ಡೆವಿಲ್’ ಸಿನಿಮಾಗೆ ಹೀರೋಯಿನ್ ಯಾಗಿದ್ದು ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ರಚನಾ ಅವರು ‘ದಿ ಡೆವಿಲ್’ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆ ಆಗಿದ್ದು ಹಾಡುಗಳು ಸೂಪರ್ ಹಿಟ್ ಆಗಿವೆ. ದಿ ಡೆವಿಲ್’ ಸಿನಿಮಾದ ಬಿಡುಗಡೆಗೂ ಮುನ್ನವೇ ಹಾಡುಗಳು ಗಮನ ಸೆಳೆದಿವೆ.

ರಚನಾ ರೈ ಅವರು ಪುತ್ತೂರಿನಲ್ಲಿ ಹುಟ್ಟಿ ಬೆಳೆದವರು. ವಿದ್ಯಾಭ್ಯಾಸವನ್ನು ಉಜಿರೆ ಎಸ್.ಡಿಎಂ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮಾಡಿರುತ್ತಾರೆ. ಕಲೆ ಬಗ್ಗೆ ಅವರಿಗೆ ಮೊದಲಿನಿಂದಲೂ ಆಸಕ್ತಿ. ಭರತನಾಟ್ಯ ಕಲಿತವರು. ನಾಟಕದ ಬಗ್ಗೆ ಆಸಕ್ತಿ ಇತ್ತು. ಮಾಡೆಲಿಂಗ್ ಮಾಡುತ್ತಾ, ಆಡಿಷನ್ ನೀಡಿ ಅವರು ‘ದಿ ಡೆವಿಲ್’ ಸಿನಿಮಾಗೆ ಆಯ್ಕೆ ಆದರು.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ನಾನು ಇಲ್ಲಿ ಇರುವುದಕ್ಕೆ ಪ್ರಕಾಶ್ ಸರ್ ಕಾರಣ. ನಮ್ಮ ಕನ್ನಡದ ಹುಡುಗಿಗೆ, ಕರ್ನಾಟಕದ ಹುಡುಗಿಗೆ ಅವಕಾಶ ಕೊಡಿ ಅಂತ ದರ್ಶನ್ ಸರ್ ಹೇಳಿದ ಆ ಮಾತೇ ಕಾರಣ’ ಎಂದಿದ್ದಾರೆ ರಚನಾ ರೈ. ನಾನೇ ನಾಯಕಿ ಅಂತ ಗೊತ್ತಾದಾಗ ನಂಬೋಕೆ ಆಗಲಿಲ್ಲ. ಶೂಟಿಂಗ್ ಶುರುವಾದಾಗಲೇ ನಂಬಿಕೆ ಬಂತು.ನಿರ್ದೇಶಕ ಪ್ರಕಾಶ್ ಅವರ ಸಿನಿಮಾದಲ್ಲಿ ನಟಿಯ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಆಡಿಷನ್​​ನಲ್ಲಿ ಸಿನಿಮಾದ ಕಷ್ಟದ ಭಾಗವನ್ನು ಕೊಟ್ಟು ನಟಿಸಲು ಹೇಳಿದರು. ಅದನ್ನು ನಾನು ಮಾಡಿ ತೋರಿಸಿದೆ. ಸಾವಿರಾರು ಜನರು ಆಡಿಷನ್ ಕೊಟ್ಟಿದ್ದರು’ ಎಂದು ರಚನಾ ರೈ ಅವರು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಆದರದ್ದೇ ಆದ ಮಹತ್ವ ಇದೆ. ನನ್ನ ಪಾತ್ರ ಬಹಳ ಮುಖ್ಯವಾಗಿದೆ. ನನ್ನ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಸಿಕ್ಕಿದೆ. ಇಂಥ ದೊಡ್ಡ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ. ಪ್ರಕಾಶ್ ಸರ್ ಅವರು ಪರ್ಫೆಕ್ಟ್ ನಿರ್ದೇಶಕ.ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು ನಾನು. ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಕಲಾವಿದರಿಗೆ ದೊಡ್ಡ ವಿಚಾರ. ಒಂದೇ ಸಿನಿಮಾದಲ್ಲಿ ನನಗೆ ಹಲವು ವಿಷಯವನ್ನು ಅವರು ಹೇಳಿಕೊಟ್ಟರು. ಗುರುಗಳು ಎಂದರೆ ಅವರ ರೀತಿ ಇರಬೇಕು ಎಂದಿದ್ದಾರೆ ರಚನಾ.

ಮೊದಲ ಬಾರಿ ದರ್ಶನ್ ಅವರನ್ನು ನೋಡಿದಾಗ ನನಗೆ ಭಯ ಆಯಿತು. ಆದರೆ ಶೂಟಿಂಗ್ ಆರಂಭ ಆದ ಬಳಿಕ ಸಪೋರ್ಟ್ ಮಾಡಿದರು. ಹಾಗಾಗಿ ಆರಾಮಾಗಿ ಕೆಲಸ ಮಾಡಿದೆ. ತುಂಬ ಮುಖ್ಯವಾದ ದೃಶ್ಯವನ್ನು ಮೊದಲ ದಿನವೇ ಶೂಟ್ ಮಾಡಿದೆವು. ನಾನು ಹೊಸಬಳು. ಕೆಲವು ಟೆಕ್ನಿಕಲ್ ಪದಗಳು ನನಗೆ ತಿಳಿಯುತ್ತಿರಲಿಲ್ಲ. ಸಮಾಧಾನದಿಂದ ಅವರು ಹೇಳಿಕೊಟ್ಟರು. ಅವರನ್ನು ನೋಡಿ ಸಾಕಷ್ಟು ಕಲಿತೆ ಎಂದು ರಚನಾ ರೈ ಅವರು ಹೇಳಿದ್ದಾರೆ.

ಇವರು ಪುತ್ತೂರು ತಾಲೂಕಿನ ಹಾರಡಿ ಶಾಲಾ ಶಿಕ್ಷಕಿ ಗಂಗಾ ರೈ ಅವರ ಪುತ್ರಿ, ಉಜಿರೆ ಸಿಎ ಬ್ಯಾಂಕ್ ಸಿಇಓ ಸರಸ್ವತಿ ಚಂದ್ರಶೇಖರ ರೈ ಅವರ ಅಕ್ಕನ ಮಗಳು. ಇವರು ಮೊದಲು ರೂಪೇಶ್ ಶೆಟ್ಟಿ ನಾಯಕತ್ವದ ಸರ್ಕಸ್ ತುಳು ಚಿತ್ರದಲ್ಲಿ ಅಭಿನಯಿಸಿದ್ದರು.

Related posts

ಉಜಿರೆ: ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಖಂಡನೆ

Suddi Udaya

ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ: ಸಂಗೀತ ಗಾನ ಸಂಭ್ರಮ,ಮಹಾ ರಂಗಪೂಜೆ, ದೇವರ ಉತ್ಸವ

Suddi Udaya

ಬಜಿರೆ‌ ಕೊರಗಲ್ಲು ಸ್ವಾಮಿ ಕೊರಗಜ್ಜ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಮಾಡಿದ ಆರೋಪ: ಐವರ ಮೇಲೆ ಪ್ರಕರಣ: ಓವ೯ರ ಬಂಧನ

Suddi Udaya

ನೆರಿಯ: ಶ್ರೀ ಕ್ಷೇತ್ರ ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ನಾರಾವಿ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಬೆಸ್ಟ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya
error: Content is protected !!