July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.5 : ನೇತ್ರಾನಗರ ಧರ್ಮಸ್ಥಳದಲ್ಲಿ “ಯಾತ್ರಾ ಆತಿಥ್ಯ” ಶುಭಾರಂಭ: ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಅನುಕೂಲ, ಸುಮಾರು 108 ರೂಮ್ಸ್

ಬೆಳ್ತಂಗಡಿ: ನೇತ್ರಾನಗರ ಧರ್ಮಸ್ಥಳದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸ್ಥೆ “ಯಾತ್ರಾ ಆತಿಥ್ಯ” ಡಿ.5 ರಂದು ಶುಭಾರಂಭಗೊಳ್ಳಲಿದೆ.

ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಿ ಸುಮಾರು 108 ರೂಮ್ಸ್ ಒಳಗೊಂಡಿರುವ ತಾಲೂಕಿನ ಬಹು ದೊಡ್ಡ ವಸತಿಗೃಹ ಕಟ್ಟಡ ಇದಾಗಿದೆ.


42೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ 91 ಪ್ರೀಮಿಯಂ ರೂಮ್ಸ್, ೮ ಪ್ರೀಮಿಯಂ ಸೂಟ್ ರೂಮ್ಸ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಆಟದ ಗ್ರೌಂಡ್, ವೆಜ್ ರೆಸ್ಟೊರೆಂಟ್, ನೀರಿನ ಕಾರಂಜಿ, ಸುಂದರವಾದ ಗಾರ್ಡನ್, ಗಿಫ್ಟ್ ಶಾಪ್, ಶಾಪಿಂಗ್ ಸೆಂಟರ್, ಹವಾನಿಯಂತ್ರಿತ ಹಾಗೂ ರಹಿತ ಸೌಲಭ್ಯಗಳಿದ್ದು ಸುಮಾರು ೫೦ ಮಂದಿಗೆ ಉದ್ಯೋಗವಕಾಶ ಸೃಷ್ಟಿಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಶ್ರೀಮತಿ ಅಪರ್ಣಾ ಗೌಡ ಮತ್ತು ಶಿವಕಾಂತ ಗೌಡ, ಮಮತಾ ಮತ್ತು ಶಿವರಾಮ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಶಿಷ್ ಎಸ್ ಗೌಡ, ಶೃತ ಎಸ್ ಗೌಡ, ಶ್ರೇಯಸ್ ಎಸ್ ಗೌಡ, ತೇಜಸ್ ಎಸ್ ಗೌಡ ಮತ್ತು ಎಸ್.ಪಿ ಗ್ರೂಪ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಲಿದ್ದಾರೆ.

Related posts

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಲಿ, ಜಿಲ್ಲೆಯ ಶಾಂತಿ ಸೌಹಾರ್ದತೆ ಮತ್ತೆ ಮರುಕಳಿಸಲಿ: ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ: ರಶ್ಮಿ ಕನ್ಸ್ಟ್ರಕ್ಷನ್ ಮಾಲಕ ಡಿ. ಆ‌ರ್. ರಾಜು ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸತ್ಯನಾರಾಯಣ ಪೂಜೆ

Suddi Udaya

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಸಿಇಟಿ ತರಬೇತಿ ಮತ್ತು ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ

Suddi Udaya
error: Content is protected !!