22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

ನಡ: “ಕಾಲೇಜಿನಲ್ಲಿ ಆಯೋಜಿಸಲಾದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಈಗ ಬಹುಮಾನವನ್ನು ಪಡೆಯುವ ಸಂಭ್ರಮ.”ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ
ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ನುಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮುರಳಿ ಬಲಿಪ ಪಾಲ್ಗೊಂಡು “ಎಲ್ಲಾ ಹಕ್ಕಿಗಳಿಗೂ ಆಹಾರ ಭಗವಂತ ಸೃಷ್ಟಿಸಿದ್ದಾನೆ ಆದರೆ ಅವು ಹುಡುಕಿಕೊಂಡು ಹೋಗಬೇಕು ಪ್ರಯತ್ನಬೇಕು.”ಎಂದು ಕರೆ ನೀಡಿದರು. ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಮಂಜುಳಾ ಅಧ್ಯಕ್ಷತೆಯನ್ನು ವಹಿಸಿದ್ದರು.


ವೇದಿಕೆಯಲ್ಲಿ ಪ್ರಭಾಕರ ಮಯ್ಯ, ಅಜಿತ್ ಆರಿಗ, ಮುನಿರಾಜ ಅಜ್ರಿ, ಮೋಹನ ಗೌಡ, ಕುಮಾರ ಭವಿತ್ ಗೌಡ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲಿಲ್ಲಿ ಪಿವಿ ಸ್ವಾಗತಿಸಿ, ಶ್ರೀಮತಿ ಸವಿತಾ ವಂದಿಸಿದರು. ಶ್ರೀಮತಿ ಪವಿತ್ರ ಮತ್ತು ಶ್ರೀಮತಿ ಸುಕನ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಸಂತಿ ಪಿ. ವರದಿ ವಾಚಿಸಿದರು. ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಎಂಟು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದರ ನಿರ್ವಹಣೆಯನ್ನು ಶಿಲ್ಪಾ ಡಿ ನಿರ್ವಹಿಸಿದರು. ಕ್ರೀಡಾ ಸಾಧಕರಿಗೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ರೀಡಾ ಪ್ರೇಮಿ ಹಾಗೂ ತರಬೇತುದಾರ ಅಜಿತ್ ಇವರನ್ನು ಸನ್ಮಾನಿಸಲಾಯಿತು.

Related posts

ತಾಲೂಕು ಶಾಮಿಯಾನ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಉಜಿರೆ ಪಂಚಾಯತ್ ನ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಗ್ರಂಥಾಲಯಕ್ಕೆ ಎನ್ನೆಸ್ಸೆಸ್ ಸ್ವಯಂ ಸೇವಕರ ಭೇಟಿ

Suddi Udaya

ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ಮೋಹಿತ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25 ಸಾವಿರ ದೇಣಿಗೆ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ

Suddi Udaya
error: Content is protected !!