25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಉಜಿರೆ: ವಿಶ್ವ ಏಡ್ಸ್ ದಿನದ ಅಂಗವಾಗಿ, ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ ಮತ್ತು ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಅಂಡ್ ಹಾಸ್ಪಿಟಲ್, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ‘Overcoming Disruption: Transforming the AIDS Response’ ಎಂಬ ವಿಷಯಾಧಾರಿತ ಜಾಗೃತಿ ಕಾರ್ಯಕ್ರಮವನ್ನು ಡಿ.01 ರಂದು ನಡೆಯಿತು.


ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಮತ್ತು ಹಾಸ್ಪಿಟಲ್‌ನ ಲೆಕ್ಚರರ್-ಕಮ್ ಮೆಡಿಕಲ್ ಆಫೀಸರ್ ಡಾ. ಯೋಹಿ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಾಗೃತಿ ಉಪನ್ಯಾಸದ ನಂತರ ನ್ಯಾಚುರೋಪತಿ ವಿದ್ಯಾರ್ಥಿಗಳು ಏಡ್ಸ್ ಜಾಗೃತಿಯ ಕುರಿತ ನಾಟಕವನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಿಂದ ಎಸ್‌ಡಿಎಮ್‌ಐಟಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದರು. ಕಾರ್ಯಕ್ರಮವನ್ನು ಡಾ. ರಜತ. ಪಿ. ಶೆಟ್ಟಿ, ಗ್ರಂಥಪಾಲಕರು, ಎಸ್‌ಡಿಎಮ್‌ಐಟಿ, ಉಜಿರೆ ಅವರು ಸಂಯೋಜಿಸಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಕು. ರಾಶಿ ಶೆಟ್ಟಿ ಅವರು ನಿರ್ವಹಿಸಿದರು.

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ 2.50ಲಕ್ಷ ಹಣ ಪತ್ತೆ

Suddi Udaya

ವೇಣೂರು ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮುಂಡಾಜೆ : ಸಿಡಿಲು ಬಡಿದು ಮನೆಗೆ ಹಾನಿ, ಅಪಾರ ನಷ್ಟ

Suddi Udaya

ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಾರ್ಯಕ್ರಮ

Suddi Udaya

ಬಳ್ಳಮಂಜ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ದಲ್ಲಿ ಸಾರ್ವಜನಿಕ ತೆನೆ ಹಬ್ಬ ಹಾಗೂ ಆಯುಧ ಪೂಜೆ

Suddi Udaya
error: Content is protected !!