ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಪೂರ್ಣಗೊಂಡಿಲ್ಲ: ಪ್ರಣವ್ ಮೊಹಂತಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸರಕಾರಕ್ಕೆ ಸಲ್ಲಿಕೆ ಆಗಿರುವುದು ಈವರೆಗಿನ ವರದಿ ಮಾತ್ರ. ದೋಷಾರೋಪ ಪಟ್ಟಿ(ಚಾಜ್‌ರ್ಶೀಟ್) ಅಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ.

ಇಂದು (ಶುಕ್ರವಾರ) ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಅಂತಿಮ ಚಾಜ್‌ರ್ಶೀಟ್ ಸಲ್ಲಿಕೆಯಾಗಿದೆ ಅಥವಾ ಸಿದ್ಧಗೊಂಡಿದೆ ಎಂದು ಹೇಳಿದವರ್ಯಾರು? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗ ಸಲ್ಲಿಕೆ ಆಗಿರುವುದು ದೋಷಾರೋಪ ಪಟ್ಟಿ ಅಲ್ಲ, ತನಿಖೆಯ ವರದಿ ಅಷ್ಟೇ ಎಂದರು.

ಈ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಮಾತ್ರ ಗುರಿಯಾಗಿಸಿ ಬಂಧಿಸಲಾಯಿತು, ಇದಕ್ಕೆ ಸಂಬಂಧಿಸಿದ ಉಳಿದವರನ್ನೇಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಣಬ್ ಮೊಹಾಂತಿ, ಎಲ್ಲರನ್ನು ಬಂಧನ ಮಾಡುವುದೇ ತನಿಖೆಯಲ್ಲ. ಸದ್ಯ ಪ್ರಕರಣದ ತನಿಖೆ ಉತ್ತಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

Related posts

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿಶ್ವ ಮಾನಸಿಕ ದಿನದ ಅಂಗವಾಗಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ

Suddi Udaya

ಮೂರನೇ ದಿನದ ಕಾರ್ಯಾಚರಣೆಗೆ ಎಸ್.ಐ.ಟಿ ಅಧಿಕಾರಿಗಳ ಜೊತೆ ನೇತ್ರಾವತಿಗೆ ಬಂದ ದೂರುದಾರ

Suddi Udaya

ನೀಟ್ ಫಲಿತಾಂಶ : ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Suddi Udaya

ಧರ್ಮಸ್ಥಳ: ಬೋಳಿಯರ್ ನಲ್ಲಿ ಪ್ರತ್ಯಕ್ಷವಾಗುತ್ತಿದೆ ಕಾಡಾನೆಗಳ ಹಿಂಡು

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾಷಣ ಸ್ಪರ್ಧೆ

Suddi Udaya
error: Content is protected !!