September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ನೀಟ್ ಫಲಿತಾಂಶ : ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ತೇಜಸ್ ಹೆಗ್ಡೆ ಹೆಚ್.ಡಿ ೯೯.೮೯೦೦೪೪೨ ಪರ್ಸಂಟೈಲ್ ನೊಂದಿಗೆ 641 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ 772ನೇ ರ‍್ಯಾಂಕ್, ತೇಜಸ್ ಆರ್ .ಬಿ ೯೯.೭೯೪೫೮೯೨ ಪರ್ಸಂಟೈಲ್‌ನೊಂದಿಗೆ 626ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ 103 ನೇ ರ‍್ಯಾಂಕ್, ಧ್ರುವ ವಿ. ಬಿ. ೯೯.೬೮೦೮೩೩೨ ಪರ್ಸಂಟೈಲ್ ನೊಂದಿಗೆ 614 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ668 ನೇ ರ‍್ಯಾಂಕ್, ಲೇಖನ್ ಕಾರಿಯಪ್ಪ ಎಂ ಡಿ ೯೯.೬೬೮೭೮೨೬ ಪರ್ಸೆಂಟೇಲ್ ನೊಂದಿಗೆ 613 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 678 ರ‍್ಯಾಂಕ್, ಆರ್ಯ ವಿ ೯೯.೫೮೧೮೩೨೨ ಪರ್ಸಂಟೈಲ್ ನೊಂದಿಗೆ 606 ಅಂಕ, ಮೋಕ್ಷಾ ಬಿ. ಎಂ ೯೯.೫೬೭೧೨೭೩ ಪರ್ಸಂಟೈಲ್ ನೊಂದಿಗೆ 605 ಅಂಕಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಹಿತಾರ್ಥ ವಿ ಎಸ್.597, ನಂದನ್ ಜಿ.595, ಕೆ ಎನ್. ರಾಘವೇಂದ್ರ 585, ಮೋನಿಶ್ ಜಿ.852, ರಾಘವೇಂದ್ರ ಧರ್ಮಪ್ಪ ಗೌಡರ್ 582, ಅಶ್ವಿನ್ ಹೊಸಟ್ಟಿ 576, ಸೃಜನಾ ಎಸ್ 574, 573, ತರುಣ್ ಸಾಗರ್ 566, ಪವನ್ ಕಲ್ಕೂರು 563, ಶ್ರಾವ್ಯಾ ಬಾಲಕೃಷ್ಣ 562, ವಿ.ಆರ್ ಗಣೇಶ್ 561, ಪ್ರಣಮ್ಯ ಭಟ್ 561, ಶಮಿತಾ ನಾಯಕ್ 559, ವರ್ಷಿತಾ ಎನ್. 559ನೇಹಾ ಜಿ.ಆರ್.554, ತನುಜಾ ಸಿ.ಪಿ.550, ಮಹಾಂತೇಶ್ ಬಳ್ಳಪ್ಪ 550ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.

ಸಂಸ್ಥೆಯ 189ವಿದ್ಯಾರ್ಥಿಗಳು 90ಪರ್ಸಂಟೈಲ್ ಗಿಂತ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. ಪ್ರತೀ ವರ್ಷವೂ NEET ಪರೀಕ್ಷೆಯ ಮೂಲಕ ಕಾಲೇಜಿನ ಹಲವಾರು ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತುAIIMS NAGPUR ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.

Related posts

ಮಡಂತ್ಯಾರು: ಭಿಕ್ಷೆ ಬೇಡುವವನ ನೆಪದಲ್ಲಿ ಬಂದು ಪವರ್ ಹೌಸ್ ಬ್ಯಾಟರಿ ಅಂಗಡಿಯಿಂದ ಮೊಬೈಲ್ ಕಳವು

Suddi Udaya

ಅ28-ನ.3: ಕೊಕ್ಕಡದಲ್ಲಿ 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

Suddi Udaya

ಧರ್ಮಸ್ಥಳ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಿಂದ ರಸ್ತೆ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿ ಕೂಟೇಲು ಎಂಬಲ್ಲಿ ಪ್ರವಾಹದಲ್ಲಿ ತೇಲಿ ಬಂದ ಜಾನುವಾರು

Suddi Udaya

ಇಳಂತಿಲ : ಪ್ರಶಿಕ್ಷಣ ವರ್ಗ – ಹಿಂದೂ ಸಂಗಮದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷ ಶಿಕ್ಷಣ ಯೋಜನೆಯ ವತಿಯಿಂದ ನಿಡ್ಲೆ ಸ.ಪ್ರೌ. ಶಾಲೆಯಲ್ಲಿ ಯಕ್ಷನಾಟ್ಯ ತರಬೇತಿ ಉದ್ಘಾಟನೆ

Suddi Udaya
error: Content is protected !!