ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತು ಉತ್ತಮ ಮಾರ್ಗದಲ್ಲಿ ನಡೆದರೆ ಸತ್ಕರ್ಮ ಫಲಗಳು ದೊರಕುತ್ತವೆ. ಸತ್ಕರ್ಮ ಫಲಗಳ ಬಲ ಪ್ರಬಲವಾಗಿ ಶಾಶ್ವತವಾಗಿ ಉಳಿಯುತ್ತದೆ” ಎಂದು ಶ್ರೀ ಧಾಮ ಮಾ

ಣಿಲದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಕುಪ್ಪೆಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ನಿರ್ಮಾಣ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನದ ಲೋಕಾರ್ಪಣೆ ಸಮಾರಂಭದ ಪ್ರಥಮ ದಿನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಗವಂತನು ನಮಗೆ ಅವಕಾಶಗಳ ಸಾಮ್ರಾಜ್ಯ ಕೊಟ್ಟಿದ್ದಾನೆ. ಕ್ಷಣಿಕ ಬದುಕಿನಲ್ಲಿ ಆನಂದದಿಂದ ಇದ್ದರೆ ಋಣಾತ್ಮಕ ಚಿಂತನೆಗಳು ಮೂಡುವುದಿಲ್ಲ. ಸದೃಢವಾದ ಹಿಂದೂ ಸಮಾಜ ಇಡೀ ದೇಶದ ಶಕ್ತಿಯಾಗಿದ್ದು, ವಿಶ್ವಕ್ಕೆ ಮಾದರಿ ನಮ್ಮೊಳಗೆ ಅಭಿಪ್ರಾಯ ಬೇಧ, ಜಾತಿಗಳ ಕಟ್ಟುಪಾಡುಗಳು ಬೇಡ ಒಂದೇ ತಾಯಿಯ ಮಕ್ಕಳಂತೆ ಹಿಂದೂ ಸಮಾಜ ಬದುಕು ನಡೆಸಬೇಕು” ಎಂದರು

ಶಾಸಕ ಹರೀಶ್ ಪೂಂಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು
ಧಾರ್ಮಿಕ ಉಪಾನ್ಯಾಸ ನೀಡಿದ ಉಪನ್ಯಾಸಕ ರವೀಶ್ ಪಡುಮಲೆ ಜಾತೀಯತೆ ಮತ್ತು ರಾಜಕೀಯ ಬಿಟ್ಟು ನಾವೆಲ್ಲರೂ ಒಂದೇ ಎಂಬ ಚಿಂತನೆ ಹಿಂದೂ ಧರ್ಮದಲ್ಲಿ ಮೂಡಿದರೆ ಭಾರತ ಇನ್ನಷ್ಟು ಬಲಿಷ್ಠವಾಗುತ್ತದೆ. ಸಮಾನತೆ ಬಗ್ಗೆ ಹಿಂದೂ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಭಕ್ತಿ ಮತ್ತು ಭಜನೆಯಿಂದ ದೇವರಿಗೆ ಹತ್ತಿರವಾಗಲು ಸಾಧ್ಯ.ಕಷ್ಟ ,ಸುಖ ಎರಡರಲ್ಲೂ ದೇವರ ಮೇಲೆ ನಂಬಿಕೆ ಇರಬೇಕು ಎಂದರು.
ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿದ್ದರು. ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ್ ಬಾಕ್ರಬೈಲು,,ಕಣಿಯೂರು ಶ್ರೀ ಮಹಾ ವಿಷ್ಣು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುದರ್ಶನ ಹೆಗ್ಡೆ, ಭಜನಾ ಮಂಡಳಿ ಅಧ್ಯಕ್ಷ ರೋಹಿತ್ ಶೆಟ್ಟಿ, ತೆಕ್ಕಾರು ದೇವಸ್ಥಾನದ ಟ್ರಸ್ಟಿ ಆಣ್ಣು ಪೂಜಾರಿ
ಕಣಿಯೂರುಗ್ರಾಮ ಪಂಚಾಯಿತಅಧ್ಯಕ್ಷರಾದ ಸೀತಾರಾಮ್ ಉಪಸ್ಥಿದ್ದರು
ಸೀತಾರಾಮ ಆಳ್ವ ಸ್ವಾಗತಿಸಿದರು ಪ್ರಭಾಕರ ಪೊಸಂದೋಡಿ ಕಾರ್ಯಕ್ರಮ ನಿರೂಪಿ ದರು
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಹೊರೆಕಾಣಿಕೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷರಾದ ಕಿರಣ್ ಚಂದ್ರ ಪುಷ್ಪಗಿರಿ. ಕಾರ್ಯದರ್ಶಿ ಸುಂದರ್ ಶೆಟ್ಟಿ. ಕೋಶಾಧಿಕಾರಿ ಜಯರಾಮ ನಾಯ್ಕ. ಗಣೇಶ ಭಜನ ಮಂದಿರದ ಟ್ರಸ್ಟ್ ಅಧ್ಯಕ್ಷ ರೋಹಿತ್ ಶೆಟ್ಟಿ. ಹಾರ್ದಿಕ ಸಮಿತಿ ಸಂಚಾಲಕ ಪ್ರಭಾಕರ್ ಗೌಡ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ರೈ. ಗಣೇಶ ಭಜನಾ ಮಂದಿರದ ಅಧ್ಯಕ್ಷರಾದ ಹರೀಶ್ ನಾಯ್ಕ. ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಹರಿಪ್ರಸಾದ್ ಪೂಂಜ
ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು ಉದ್ಯಮಿ ಶಿವಶಂಕರ ನಾಯಕ್ ಕಾರ್ಯಾಲಯ, ಸತ್ಯ ಧರ್ಮ ಚಾವಡಿ ಮನೆ ಅಧ್ಯಕ್ಷ ಜನಾರ್ದನ ಪೂಜಾರಿ ಉಗ್ರಾಣವನ್ನು ಉದ್ಘಾಟಿಸಿದರು.











