July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಮುಗೇರಡ್ಕ ಅಶೋಕ್ ಪಿ.ಎಲ್ ರವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಂದ ಗೌರವಾರ್ಪಣೆ

ಬೆಳ್ತಂಗಡಿ : ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮ ಮುಗೇರಡ್ಕದ ಅಶೋಕ್ ಪಿ.ಎಲ್ ರವರಿಗೆ ಶಾಸಕರ ನಿವಾಸದಲ್ಲಿ ಡಿ. 08 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಗೌರವಾರ್ಪಣೆ ಸಲ್ಲಿಸಿದರು.

ದಿ. ಲಕ್ಷ್ಮಣ ಗೌಡ ಮತ್ತು ಕುಸುಮ ದಂಪತಿಯ ಪುತ್ರನಾದ ಅಶೋಕ್ ಪಿ ಲ್ ಇವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಪಡೆದು, ಉತ್ತಮ ವಾಲಿಬಾಲ್ ಕ್ರೀಡಾಕೂಟವಾಗಿದ್ದು, ಇವರು 2003 ರಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಏರ್ಪೋರ್ಸ್ ನಲ್ಲಿ ಆಯ್ಕೆಯಾಗಿ 2004 ರಲ್ಲಿ ಮಹಾರಾಷ್ಟ್ರ ದ ನಾಸಿಕ್ ನಲ್ಲಿ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಲೇ ಲಡಾಕ್, ಜಮ್ಮು ಕಾಶ್ಮೀರ, ಶಿಲ್ಲೊಂಗ್, ಮೇಘಾಲಯ, ಅಸ್ಸಾಂ, ಪಠಾನ್ ಕೋಟ್, ಕೂಪೂರ, ಬಟಾಮುಲ್ಲಾ, ರಾಂಚಿ ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶಗಳಲ್ಲಿ, ಮೈ ಕೊರೆಯುವ 25 ಡಿಗ್ರಿ ತಾಪಮಾನದಲ್ಲೂ ಸುಮಾರು 22 ವರ್ಷ ದೇಶ ಸೇವೆ ಮಾಡಿ ನವೆಂಬರ್ 31 ರಂದು ಸೇವೆಯಿಂದ ನಿವೃತ್ತಿ ಗೊಂಡು ಡಿ 04 ರಂದು ಊರಿಗೆ ಬಂದಿರುತ್ತಾರೆ.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ, ತಾಲೂಕು ಬಿ ಎಂ ಎಸ್ ಅಧ್ಯಕ್ಷರು ವಕೀಲರಾದ ಉದಯ ಕುಮಾರ್ ಬಿ. ಕೆ, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಪಾಲ್ತಿಮಾರ್, ವಿಮಲ ತಾರಿದಡಿ, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಪ್ರಮುಖರಾದ ಅಶೋಕ ಮೊಗ್ರ, ಕುಶಾಲಪ್ಪ ಗೌಡ, ಗೋಪಾಲ ಗೌಡ, ರಾಜೇಶ್, ಶಿವಪ್ಪ ಗೌಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಮುಂಡ್ರುಪಾಡಿ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಯಕ್ಷ ಭಾರತಿಯಿಂದ ಯಕ್ಷಗಾನ ತಾಳಮದ್ದಳೆ

Suddi Udaya

ಬೆಳ್ತಂಗಡಿಯಲ್ಲಿ ಬೈಕ್ ಮತ್ತು ಕಾರು ಡಿಕ್ಕಿ : ಬೈಕ್ ಸವಾರನಿಗೆ ಗಾಯ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವ

Suddi Udaya

ಮಂಗಳೂರಿನಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!