ಗೇರುಕಟ್ಟೆ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಇದರ ಜಲಾನಯನ ಮಹೋತ್ಸವ ಅಭಿಯಾನ ಕಾರ್ಯಕ್ರಮವು ಕಳಿಯ ಜಲಾನಯನ ಸಮಿತಿಯ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗೇರುಕಟ್ಟೆ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಜಲಾನಯನ ಸಮಿತಿ ಅಧ್ಯಕ್ಷರು, ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಕರ್ ಎಮ್. ವಹಿಸಿದರು.
ಪ್ರಾಸ್ತವಿಕವಾಗಿ ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ಜಲಾನಯನ ಕಾರ್ಯಕ್ರಮ ಮತ್ತು ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜರವರು ನೀರು ಮತ್ತು ಮಣ್ಣು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ನೀರಿನ ಅಂತರ್ಜಲವನ್ನು ಹೆಚ್ಚಿಸುವ ಕೆಲಸ ತಾಲೂಕಿನಾದ್ಯಂತ ಆಗುತ್ತಿದೆ ಎಂದು ತಿಳಿಸಿದರು. ಮುಕ್ತಾಯಗೊಂಡ ಕಾಮಾಗಾರಿಯ ಲೋಕರ್ಪಣೆಯನ್ನು ಶಾಸಕರು ನೆರವೇರಿಸಿದರು.
ಕಳಿಯ ಜಲಾನಯನ ಸಮಿತಿಯ ಕಾಮಗಾರಿಗಳ ಸಮುದಾಯ ಆಸ್ತಿಯನ್ನು ಪಂಚಾಯತ ಅಧ್ಯಕ್ಷರಿಗೆ/ ಪಿ.ಡಿ.ಓ ರವರಿಗೆ ಸಹಾಯಕ ಕೃಷಿ ನಿರ್ದೇಶಕರವರು ಹಸ್ತಾಂತರ ಮಾಡಿದರು. ಹಳೆಯ ಬ್ಯಾಚ್-1ದ(ಜಲಾನಯನ ಸಮಿತಿ ಅಳದಂಗಡಿ, ಅಂಡಿಂಜೆ, ನಾರಾವಿ, ಬಳೆಂಜ) ಕಾಮಗಾರಿಗಳ ರಿಪೇರಿ ಕಾರ್ಯಕ್ರಮಗಳ ಕೈಪಿಡಿಯನ್ನು ಬಿಡುಗಡೆಯನ್ನು ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞ ಕೆ. ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಉಪಕೃಷಿ ನಿರ್ದೇಶಕ ಶಿವಶಂಕರ್ ಧಾನೆಗೊಂಡರ್ ಮಾತನಾಡಿ ಜಲಾನಯನ ಕಾರ್ಯಕ್ರಮವು ಕೇಂದ್ರ ಮತ್ತು ಸರ್ಕಾರದ ಯೋಜನೆಯಡಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಅನುಷ್ಠಾನ ಸಮರ್ಪಕವಾಗಿ ನಡೆದಿದೆ ಮತ್ತು PMKSY WOC 2.0 ಯೋಜನೆಯಡಿ ಬಹಳಷ್ಟು ರೈತರು ಸವಲತ್ತುಗಳನ್ನು ಪಡೆದು ಸದುಪಯೋಗ ಪಡೆದುಕೊಂಡಿರುತ್ತಾರೆ ಮತ್ತು ಕಿಂಡಿಅಣೆಕಟ್ಟು ಹಲಗೆಯನ್ನು ಹಾಕಿ ಸದ್ಬಳಕೆ ಮಾಡುವಂತೆ ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಯಾದ ನಾರಾಯಣ ಪೂಜಾರಿರವರು ಮಣ್ಣು, ನೀರು ಸಂರಕ್ಷಣೆಯನ್ನು ಮಾಡಬೇಕೆಂದು ವ್ಯಕ್ತಪಡಿಸಿ. ನಮ್ಮ ಸುತ್ತಮುತ್ತ ಪರಿಸರ ಪ್ರಾಣಿ ಪಕ್ಷಿಗಳು ಪ್ರಕೃತಿಯ ಜೀವ ಸಂಕುಲವನ್ನು ನಾವು ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಸಂತ ಮಜಲ್, ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಉಪಾಧ್ಯಕ್ಷ ವಿನಯ್ ಕುಮಾರ್ ಹೆಗ್ಡೆ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾರ್ಯನಿರ್ವಹಣಾಧಿಕಾರಿ ಕವಿತಾ, ಮಾಜಿ ಅಧ್ಯಕ್ಷರು, ಜಲಾನಯನ ಸಮಿತಿಯ ಸದಸ್ಯರು ಮತ್ತು ಕಳಿಯ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಜಲಾನಯನ ಸಮಿತಿ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸದಸ್ಯರು, ಮಾನ್ಯ ಉಪಕೃಷಿ ನಿರ್ದೇಶಕರು-2 ಪುತ್ತೂರು, ಕೃಷಿಕ ಸಮಾಜದ ಉಪಾಧ್ಯಕ್ಷರು, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಕಾರ್ಯ ನಿರ್ವಣಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಲಾನಯನ ಯೋಜನೆಯಡಿ ಸವಲತ್ತು ಪಡೆದ ರೈತರು ಅಭಿಪ್ರಾಯ ತಿಳಿಸಿದರು. ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ವಿನಯ್ ಕುಮಾರ್ ಹೆಗ್ಡೆಯವರು ಇಲಾಖೆಯ ಸವಲತ್ತಿನ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಬೆಳ್ತಂಗಡಿ ಕೃಷಿ ಅಧಿಕಾರಿ ಗಣೇಶ್ ಸ್ವಾಗತಿಸಿದರು. ಜಲಾನಯನ ಸಹಾಯಕ ಜಯಂತ್ ಗೌಡ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಇಲಾಖಾಧಿಕಾರಿಗಳು, ಇಲಾಖಾ ಸಿಬ್ಬಂದಿಗಳು ಭಾಗವಹಿಸಿ ಜಲಾನಯನ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .











